
ಕರ್ನಾಟಕ
ಚಿನ್ನವನ್ನು ಕದಿಯುತ್ತಿದ್ದ ಕಳ್ಳರ ಬಂಧನ
ರಾಜ್ಯ(ಹಾಸನ)ಆ.26:- ಚಿನ್ನವನ್ನು ದೋಚುತ್ತಿದ್ದ ಇಬ್ಬರು ಕಳ್ಳರನ್ನು ಬಂಧಿಸುವಲ್ಲಿ ಅರಕಲಗೂಡು ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ರಘು ಹಾಗೂ ಓಂಪ್ರಕಾಶ್ ಎಂದು ಗುರುತಿಸಲಾಗಿದೆ. ಮೂರು ದಿನದ ಹಿಂದೆ ಕೃಷ್ಣ ಬ್ಯಾಂಕ್ ಹಾಗೂ ಜ್ಯೂವೆಲ್ಲರಿಯಲ್ಲಿ ಕಳ್ಳತನ ನಡೆದಿತ್ತು. ಹೊಳೆನರಸೀಪುರದ ಡಿವೈಎಸ್ಪಿ,ಶಶಿಧರ್,ಹಾಗೂ ಸರ್ಕಲ್ ಇನ್ಸಪೆಕ್ಟರ್ ಶಿವರಾಜ್ ಮುಧೋಳ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ಕಳ್ಳರನ್ನು ಬಂಧಿಸಿದ್ದಾರೆ. ಬಂಧಿತರಿಂದ 3ಕೆಜಿ ಚಿನ್ನ, 6 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ. (ಕೆ.ಎಸ್,ಎಸ್.ಎಚ್)