ಮೈಸೂರು

ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಲು ಪರಿಸರವನ್ನು ಸಂರಕ್ಷಿಸಬೇಕು : ಡಾ.ಬಿ.ಚಂದ್ರಶೇಖರ

ಮೈಸೂರು,ಆ.26:- ಕುವೆಂಪುನಗರದಲ್ಲಿರುವ ಬಾಸುದೇವ ಸೋಮಾನಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ  “ಮಳೆ ನೀರು ಕೊಯ್ಲು ಏಕೆ ? ಹೇಗೆ ? ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ  ಉದ್ಘಾಟನೆಯನ್ನು ಮೈಸೂರು ವಿವಿ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ  ಡಾ.ಬಿ.ಚಂದ್ರಶೇಖರ ನೆರವೇರಿಸಿದರು. ಬಳಿಕ  ಮಾತನಾಡಿದ ಅವರು ಪ್ರತಿಯೊಬ್ಬರು ಪರಿಸರ ಸ್ನೇಹಿತರಾಗೋಣ, ಪರಿಸರದಿಂದ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಲು ನಾವೆಲ್ಲರೂ ಪರಿಸರವನ್ನು ಸಂರಕ್ಷಿಸಬೇಕು. ಜೊತೆಗೆ ನೀರನ್ನು ಭೂಮಿಗೆ ಹಿಂಗಿಸುವಲ್ಲಿ ವಿದ್ಯಾರ್ಥಿಗಳು ಕಾರ್ಯಪ್ರವೃತ್ತರಾಗಬೇಕೆಂದು ಕರೆ ನೀಡಿದರು.

ಸಂಪನ್ಮೂಲ ವ್ಯಕ್ತಿಗಳಾದ  ಪಾಲ್ಗೊಂಡ ಸಾವಯವ ಕೃಷಿಕ .ಎ.ಪಿ.ಚಂದ್ರಶೇಖರ್‍ ಮಾತನಾಡಿ ಪರಿಸರ ನಮ್ಮೆಲ್ಲರಿಗೂ ಬೇಕಾದಂತಹ ಆರೋಗ್ಯಕರವಾದ ವಸ್ತುಗಳನ್ನು ನೀಡುತ್ತಿದೆ, ಅದನ್ನು ನಾವುಗಳು ಬಳಸಿಕೊಳ್ಳುತ್ತಾ ಬರುತ್ತಿದ್ದೇವೆ ಮತ್ತು ಮಳೆಯ ನೀರನ್ನು ಸಂಗ್ರಹ ಮಾಡುವುದು ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಬಹು ಮುಖ್ಯವಾದುದಾಗಿದೆ. ಈ ಸಂದರ್ಭದಲ್ಲಿ ಪರಿಸರದಿಂದ ಸಿಗುವ ಎಲ್ಲಾ ತರಹದ ಹಣ್ಣುಗಳನ್ನು /ಎಲೆಗಳನ್ನು ತಂದು ವಿದ್ಯಾರ್ಥಿಗಳಿಗೆ ಹಂಚುವುದರ ಮೂಲಕ ಅವುಗಳ ಮಹತ್ವವನ್ನು ಮತ್ತು ಮಳೆ ನೀರು ಸಂಗ್ರಹಿಸುವ ವಿಧಾನಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲ  ಡಾ.ಎಂ.ಮಹದೇವಯ್ಯ ವಹಿಸಿದ್ದರು. ಈ ಸಂದರ್ಭ ಡಾ.ಬಿ.ಚಂದ್ರಶೇಖರ,ಪ್ರೊ. ಟಿ.ರಮೇಶ್ ಹಾಗೂ  ಪ್ರೊ. ಬಿ. ಸದಾಶಿವ ಭಟ್ ಮತ್ತಿತರರು ಉಪಸ್ಥಿತರಿದ್ದರು. (ಎಸ್.ಎಚ್)

Leave a Reply

comments

Related Articles

error: