ಮೈಸೂರು

ಪೊಲೀಸ್ ಠಾಣೆ ಮೆಟ್ಟಿಲೇರಿದ ಫೇಸ್‍ಬುಕ್ ಲವ್

ಅವರಿಬ್ಬರು ಫೇಸ್‍ಬುಕ್‍ನಲ್ಲಿ ಪ್ರೀತಿ ಆರಂಭಿಸಿದರು. ಆಕೆ ಮದುವೆಯಾಗುವಂತೆ ಕೇಳಿದಾಗ ಆತ ನಿರಾಕರಿಸಿದ್ದಾನೆ. ಈ ಪ್ರಕರಣ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಗಾಯತ್ರಿಪುರಂ ನಿವಾಸಿ ಗಣೇಶ್ ಅದೇ ಪ್ರದೇಶದ ಹುಡುಗಿಯೊಬ್ಬಳನ್ನು ಫೇಸ್‍ಬುಕ್‍ನಲ್ಲಿ ಫ್ರೆಂಡ್ ಮಾಡಿಕೊಂಡು ಪ್ರೇಮ ನಿವೇದನೆ ಮಾಡಿಕೊಂಡಿದ್ದ. ಆಕೆ ಆತನ ಪ್ರಪೋಸಲ್‍ ಅನ್ನು ಒಪ್ಪಿ, ಇವರಿಬ್ಬರೂ ಮಡಿಕೇರಿಗೆ ಪ್ರವಾಸ ಕೂಡ ಹೋಗಿ ಬಂದಿದ್ದರು. ಮೈಸೂರಿಗೆ ವಾಪಸ್ಸಾದ ಬಳಿಕ ತನ್ನನ್ನು ಮದುವೆಯಾಗುವಂತೆ ಹುಡುಗಿ ಹೇಳಿದ್ದಾಳೆ. ಆತ ಮದುವೆಯಾಗುವುದಿಲ್ಲ ಎಂದು ನಿರಾಕರಿಸಿದ್ದಾನೆ. ಹಾಗಾಗಿ ಹುಡುಗಿ ಉದಯಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ಗಣೇಶ್‍ಗೆ ಕರೆ ಮಾಡಿದ ಇನ್ಸ್‍ಪೆಕ್ಟರ್ ಸಂತೋಷ್ ಅವರು, ಆಕೆಯನ್ನು ಮದುವೆಯಾಗುವಂತೆ ಕೇಳಿಕೊಂಡಿದ್ದಾರೆ. ಆದರೆ ಆತ ನಿರಾಕರಿಸಿದ್ದಾನೆ. ಪೊಲೀಸರು ಈ ಪ್ರಕರಣವನ್ನು ಇತ್ಯರ್ಥಗೊಳಿಸಲು ಯತ್ನಿಸುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಫೇಸ್‍ಬುಕ್‍ನಲ್ಲಿ ಹೆಚ್ಚು ಪ್ರೇಮ ಪ್ರಕರಣಗಳು ಹುಟ್ಟಿಕೊ‍ಳ್ಳುತ್ತಿವೆ. ಇದರಿಂದ ಬಹಳ ಮಂದಿ ಮೋಸ ಹೋಗಿದ್ದಾರೆ. ಆದರೂ, ಯಾವುದೇ ಪಾಠ ಕಲಿಯದೆ ಮತ್ತೆ ಮತ್ತೆ ಮೋಸ ಹೋಗುತ್ತಿದ್ದಾರೆ.

ನಿದ್ರೆ ಮಾತ್ರೆ ಸೇವಿಸಿ ಯುವಕ ಆತ್ಮಹತ್ಯೆ:

ಇರ್ವಿನ್ ರಸ್ತೆಯ ಬಳಿ ಶರತ್ ಕುಮಾರ್(22) ಎಂಬವರು ನಿದ್ರೆ ಮಾತ್ರೆಯನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರು ಮೂಲದ ಕುಮಾರ್ ಮೈಸೂರಿನ ಪೆಟ್ರೋಲ್‍ ಬಂಕ್‍ವೊಂದರಲ್ಲಿ ಕೆಲಸ ಮಾಡುತ್ತಿದ್ದು, ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಮೃತದೇಹವನ್ನು ಜೆಎಸ್‍ಎಸ್‍ ಶವಾಗಾರದಲ್ಲಿರಿಸಲಾಗಿದೆ. ಲಷ್ಕರ್ ಮೊಹಲ್ಲಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆಯನ್ನಾರಂಭಿಸಿದ್ದಾರೆ.

Leave a Reply

comments

Related Articles

error: