ಮೈಸೂರು

ಆ.27ರಂದು ಬ್ಲಾಕ್ ಕಾಂಗ್ರೆಸ್ ಸಮಾವೇಶ

ಮೈಸೂರು,ಆ.26 : ದೇವರಾಜ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಂಘಟನಾ ಸಮಾವೇಶವನ್ನು ಆ.27ರ ಬೆಳಗ್ಗೆ 10.30ಕ್ಕೆ ಮಂಜುನಾಥಪುರದ ಕೆಂಪೇಗೌಡ ಮೊಮೋರಿಯಲ್ ಹಾಲ್ ನಲ್ಲಿ ಆಯೋಜಿಸಿದೆ.

ಶಾಸಕ ವಾಸು ನೇತೃತ್ವದಲ್ಲಿ ನಡೆಯುವ ಸಭೆಯನ್ನು ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥ್ ಉದ್ಘಾಟಿಸುವರು. ಡಿಸಿಸಿ ಅಧ್ಯಕ್ಷ ಆರ್.ಮೂರ್ತಿ ಅಧ್ಯಕ್ಷತೆ ವಹಿಸುವರು.

ಸಾಹುಕಾರ್ ಚೆನ್ನಯ್ಯ ಬ್ಲಾಕ್ ಕಾಂಗ್ರೆಸ್ :

ಸಚಿವ ತನ್ವೀರ್ ಸೇಠ್ ನೇತೃತ್ವದಲ್ಲಿ ನಡೆಯುವ ಸಾಹುಕಾರ್ ಚೆನ್ನಯ್ಯ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಂಘಟನಾ ಸಮಾವೇಶವನ್ನು ಆ.27ರ ಮಧ್ಯಾಹ್ನ 3 ಗಂಟೆಗೆ ತಿ.ನರಸೀಪುರ ರಸ್ತೆಯ ಶಿಕ್ಷಕರ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥ್ ಉದ್ಘಾಟಿಸುವರು. ಡಿಸಿಸಿ ಅಧ್ಯಕ್ಷ ಆರ್.ಮೂರ್ತಿ ಅಧ್ಯಕ್ಷತೆ ವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: