ಸುದ್ದಿ ಸಂಕ್ಷಿಪ್ತ

ಆ.27ರಂದು ಆರ್.ಎಸ್.ಎನ್ ಶ್ರೇಷ್ಠ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ

ಮೈಸೂರು,ಆ.26 : ಆರ್.ಎಸ್.ನಾಯ್ಡು ಕಲೆ ಮತ್ತು ಸಾಂಸ್ಕೃತಿಕ ಕಲ್ಯಾಣ ದತ್ತಿಯಿಂದ ಕಲಾವಿದ ಆರ್.ಎಸ್.ನಾಯ್ಡುರವರ 112ನೇ ಜನ್ಮ ದಿನಾಚರಣೆಯಂಗವಾಗಿ ಆರ್.ಎಸ್.ಎನ್ ಶ್ರೇಷ್ಠ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆ.27ರ ಬೆಳಗ್ಗೆ 10.30ಕ್ಕೆ ಸರಸ್ವತಿಪುರಂನ ಯೋಗಿನಾರೇಯಣ ಬಣಜಿಗ ಸಂಘದ ಮಲ್ಲಾರ ಭವನದಲ್ಲಿ ಆಯೋಜಿಸಲಾಗಿದೆ.

ಮೈಲ್ಯಾಕ್ ಅಧ್ಯಕ್ಷ ಎಚ್.ಎ.ವೆಂಕಟೇಶ್ ಉದ್ಘಾಟಿಸುವರು. ಮೈಸೂರು ವಿವಿಯ ಗಾಂಧಿ ಅಧ್ಯಯನ ಕೇಂದ್ರ ನಿರ್ದೇಶಕ ಡಾ.ಎಸ್.ಶಿವರಾಜಪ್ಪ, ಕುವೆಂಪು ವಿವಿಯ ವಿಶ್ರಾಂತ ಕುಲಪತಿ ಡಾ.ಪಿ.ವೆಂಕಟರಾಮಯ್ಯ, ಟ್ರಸ್ಟ್ ಅಧ್ಯಕ್ಷ ಪಿ.ವೈ.ವೆಂಕಟಾದ್ರಿ ಅಧ್ಯಕ್ಷತೆ ವಹಿಸುವರು. ಕಾರ್ಯದರ್ಶಿ ಹೆಚ್.ಆರ್.ಗೋಪಾಲಕೃಷ್ಣ ಭಾಗವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: