ಸುದ್ದಿ ಸಂಕ್ಷಿಪ್ತ
ಆ.27ರಂದು ಕಾವೇರಿ ಜಲವಿವಾದ ಕೃತಿ” ಒಂದು ಸಂವಾದ
ಮೈಸೂರು,ಆಗಸ್ಟ್.26: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸಂವಹನ ಪ್ರಕಾಶನ ಅವರ ಸಂಯುಕ್ತಾಶ್ರಯದಲ್ಲಿ ಆ.27ರಂದು ಬೆಳಿಗ್ಗೆ 10.30ಕ್ಕೆ ಕಲಾಮಂದಿರದ ಮನೆಯಂಗಳಲ್ಲಿ ಅರ್ಜುನಹಳ್ಳಿ ಪ್ರಸನ್ನ ಕುಮಾರ್ ಅವರ “ಕಾವೇರಿ ಜಲವಿವಾದ ಕೃತಿ” ಒಂದು ಸಂವಾದ ಎಂಬ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಹಿರಿಯ ಸಾಹಿತಿ ಡಾ.ಸಿ.ಪಿ.ಕೆ. ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದು, ಕನ್ನಡ ಸಾಹಿತ್ಯ ಪರಿಷತ್ನ ಜಿಲ್ಲಾ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಅದ್ಯಕ್ಷತೆ ವಹಿಸಲಿದ್ದಾರೆ.( ವರದಿ:ಪಿ.ಜೆ )