ಮೈಸೂರುಸಿಟಿ ವಿಶೇಷ

ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಲು ನೋಂದಣಿ ಮಾಡಿಸಿಕೊಳ್ಳಿ…

ಸ್ವಚ್ಛ ನಗರಿ ಮೈಸೂರು ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲೂ ತನ್ನ ತನ್ನ ಛಾಪು ಮೂಡಿಸುತ್ತಿದೆ. ಅದರಂತೆ ಮೈಸೂರಿನ ನಾಗರಿಕರು, ಸಂಘ-ಸಂಸ್ಥೆಗಳು ಕೂಡ ಈ ಯೋಜನೆಗೆ ಕೈಜೋಡಿಸುತ್ತಿದ್ದಾರೆ. ಸದ್ಯ ಈ ಬೆಳವಣಿಗೆ ಅಗ್ರಹಾರದಲ್ಲಿ ಡಿಫರೆಂಟ್ ಆಗಿ ನಡೆಯುತ್ತಿದೆ. ಕನ್ನಡ ರಾಜ್ಯೋತ್ಸದ ಅಂಗವಾಗಿ ಸ್ವಚ್ಛ ನಗರಿಯನ್ನ ಸ್ವಚ್ಛವಾಗಿರಿಸಲು ಚೊಮನಸೇವೆ (ಚೊಕ್ಕ ಮಹಿಷೂರಿನ ಸೇವಾ ವೇದಿಕೆ) ವತಿಯಿಂದ ನೊಂದಣಿ ಕಾರ್ಯ ಆರಂಭವಾಗಿದೆ. ಇಷ್ಟು ದಿನ ಮಹತ್ವದ ದಾಖಲೆಗಳನ್ನು ಇದ್ದ ನೋಂದಣಿ ವ್ಯವಸ್ಥೆಯನ್ನು ಇದೀಗ ಸ್ವಚ್ಛತಾ ಕಾರ್ಯಕ್ಕೂ ಟ್ಯಾಗ್ ಮಾಡಲಾಗಿದೆ. ನ.1 ರಂದು ಕನ್ನಡ ರಾಜ್ಯೋತ್ಸವದ ಅಂಗವಾಗಿ ಅಗ್ರಹಾರದ ಪ್ರಮುಖ ರಸ್ತೆ ಹಾಗೂ ಅಕ್ಕ-ಪಕ್ಕದ ರಸ್ತೆಗಳನ್ನು ಸ್ವಚ್ಛತೆ ಮಾಡಲು ನಿರ್ಧರಿಸಲಾಗಿದೆ.

img-20161024-wa0015

 

ನೊಂದಣಿಯಾಗ್ತಿದೆ ಸ್ವಯಂಸೇವಕರ ಸಂಖ್ಯೆ…

ಈಗಾಗ್ಲೆ 30ಕ್ಕೂ ಹೆಚ್ಚು ಮಂದಿ ಈ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಲು ಸ್ವಯಂಸ್ವೇವಕರು ತಾವಾಗಿಯೇ ಹೆಸರನ್ನ ನೊಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ತಮ್ಮ ಪುಟ್ಟ ಗ್ರಂಥಾಲಯದ ಮುಂಭಾಗದಲ್ಲಿ ಇಷ್ಟವುಳ್ಳವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಹೆಸರು ನೊಂದಣಿ ಮಾಡಿಸಿಕೊಳ್ಳಿ ಎಂದು ಹಳದಿ ಬಣ್ಣದ ಬೋರ್ಡೊಂದನ್ನು ಹಾಕಲಾಗಿದೆ. ಇದರಿಂದ ಸ್ಥಳೀಯರು, ಪರಿಸರವಾದಿಗಳು ಸೇರಿದಂತೆ ಹಿರಿಯರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರೋದು ವಿಶೇಷ.

ವಿಶೇಷವೆಂದರೆ ಪ್ರಭಾಕರ್ ಅವರು ಸಮಸೇವಾ ಟ್ರಸ್ಟ್ ಸ್ಥಾಪಿಸಿ ಇವತ್ತಿಗೂ ಎಲ್ಲರೂ ಪತ್ರಿಕೆ ಓದಲೆಂದು ಚಿಕ್ಕದಾದ ಗ್ರಂಥಾಲಯ ನಿರ್ಮಿಸಿ, ಮಾಹಿತಿ ನೀಡುತ್ತಾ ಬರುತ್ತಿದ್ದಾರೆ. ಇಲ್ಲಿಗೆ ಆಗಮಿಸುವ ಓದುಗರು ಕೂಡ ಈ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರಂತೆ. ಇದರಿಂದ ಗಣರಾಜ್ಯೋತ್ಸವ ಸ್ವಚ್ಛತೆಯಿಂದ ಕೂಡಿರುತ್ತೆ ಅಂತಾರೆ ಪ್ರಭಾಕರ್ ಅವರು. ಒಟ್ಟಾರೆ, ಕನ್ನಡ ರಾಜ್ಯೋತ್ಸವಕ್ಕೆ ಡಿಫರೆಂಟ್ ಕಾನ್ಸೆಪ್ಟ್ ಒಂದು ರೆಡಿಯಾಗಿದೆ. ಈ ಯೋಜನೆಯ ಮುಖಾಂತರ ಸ್ವಚ್ಛತೆಯ ಜಪ ಆರಂಭವಾಗಿರೋದು ಸಂತಸವೇ ಸರಿ.

– ಸುರೇಶ್ ಎನ್.

img-20161024-wa0016

Leave a Reply

comments

Related Articles

error: