ಸುದ್ದಿ ಸಂಕ್ಷಿಪ್ತ

ಆ.27ರಂದು ವೀರಾಂಜನೇಯ ಶೌರ್ಯ ಪ್ರಶಸ್ತಿ ಪ್ರದಾನ ಸಮಾರಂಭ

ಮೈಸೂರು,ಆ.26 : 71ನೇ ಸ್ವಾತಂತ್ರೋತ್ಸವ ಪ್ರಯುಕ್ತ ಕಲ್ಯಾಣಗಿರಿನಗರದ ಕಲ್ಯಾಣ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಸ್ಥಾನದಿಂದ ಕುಸ್ತಿ ಪಟುಗಳಿಗೆ ವೀರಾಂಜನೇಯ ಶೌರ್ಯ ಪ್ರಶಸ್ತಿ ಪ್ರದಾನವನ್ನು ಆ.27ರ ಬೆಳಗ್ಗೆ 9.30ಕ್ಕೆ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿದೆ.

ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿ.ಶ್ರೀನಿವಾಸ ಪ್ರಸಾದ್ ಅಧ್ಯಕ್ಷತೆ ವಹಿಸುವರು.  ಮೇಲುಕೋಟೆ ವಂಗೀಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ ಸಾನಿಧ್ಯ ವಹಿಸುವರು.ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕೋಟೆ ಎಂ. ಶಿವಣ್ಣ, ಬಿಜೆಪಿ ನಗರಾಧ್ಯಕ್ಷ ಡಾ.ಮಂಜುನಾಥ್, ಉಪಮಹಾಪೌರೆ ರತ್ನ ಲಕ್ಷ್ಮಣ, ಜಿ.ಪಂ.ಸದಸ್ಯ ಎಸ್. ಮಾದೇಗೌಡ ಮೊದಲಾದವರು ಭಾಗವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: