ದೇಶಪ್ರಮುಖ ಸುದ್ದಿವಿದೇಶ

ಆಧಾರ್ ಮಾಹಿತಿ ಮೇಲೆ ಕಣ್ಣಿಟ್ಟಿರುವ ಅಮೆರಿಕಾ ಗುಪ್ತಚರ ಸಂಸ್ಥೆ : ವಿಕಿಲೀಕ್ಸ್’ನಿಂದ ಬಹಿರಂಗ

ನವದೆಹಲಿ, ಆ.27 : ಅಮೆರಿಕ ಗುಪ್ತಚರ ಸಂಸ್ಥೆಯು ಭಾರತದ ಆಧಾರ್ ವ್ಯವಸ್ಥೆಯಲ್ಲಿರುವ ವೈಯಕ್ತಿಯ ಮಾಹಿತಿಗಳನ್ನು ಕದ್ದು ನೋಡುತ್ತಿದೆ ಎಂದು ವಿಕಿಲೀಕ್ಸ್ ವರದಿ ಹೇಳಿದೆ. ಭಾರತದ ಸವೋಚ್ಚ ನ್ಯಾಯಾಲಯವು ಖಾಸಗಿತನವನ್ನು ಮೂಲಭೂತ ಹಕ್ಕು ಎಂದು ಹೇಳಿರುವ ಸಂದರ್ಭದಲ್ಲೇ ಖಾಸಗೀತನಕ್ಕೆ ಧಕ್ಕೆ ತರುವಂತಹ ಸುದ್ದಿಯೊಂದು ಬಂದಿವುರುದು ಎಚ್ಚರಿಕೆಯ ಗಂಟೆ ಬಾರಿಸಿದೆ.

ಬೇಹುಗಾರಿಕಾ ತಂತ್ರಜ್ಞಾನಗಳನ್ನು ಬಳಸಿ ಅಮೆರಿಕಾದ ಗುಪ್ತಚರ ಸಂಸ್ಥೆ ಸೆಂಟ್ರಲ್ ಇಂಟಿಲೆಜೆನ್ಸ್ ಏಜನ್ಸಿಯು (CIA) ಭಾರತೀಯರ ಆಧಾರ್ ವಿವರಗಳನ್ನು ಪಡೆದಿದೆ ಎಂದು ಹೇಳಲಾಗಿದೆ. ಕ್ರಾಸ್ ಮ್ಯಾಚ್ ಟೆಕ್ನಾಲಜೀಸ್ ಎಂಬ ಸಂಸ್ಥೆ ಅಭಿವೃದ್ಧಿಪಡಿಸಿರುವ ತಂತ್ರಜ್ಞಾನವನ್ನು ಸಿಐಏ ಬಳಸುತ್ತಿದೆ. ಅದೇ ಸಂಸ್ಥೆ ಭಾರತದ ಆಧಾರ್ ಯೋಜನೆಗೆ ಬಯೋಮೆಟ್ರಿಕ್ ತಂತ್ರಜ್ಞಾನವನ್ನು ಒದಗಿಸಿದೆ. ಆದುದರಿಂದ ಭಾರತೀಯರ ಆಧಾರ್ ಮಾಹಿತಿಗಳು ಸೋರಿಕೆಯಾಗಿರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ ಎಂದು ಹೇಳಲಾಗಿದೆ.

ಆದರೆ ಈ ವರದಿಗಳು ಸುಳ್ಳು, ಆಧಾರ್ ಮಾಹಿತಿಯು ಸುರಕ್ಷಿತವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

-ಎನ್.ಬಿ.

Leave a Reply

comments

Related Articles

error: