ಸುದ್ದಿ ಸಂಕ್ಷಿಪ್ತ

ಆ.30 : ಪಿಂಚಣಿ ಅದಾಲತ್

ಮಡಿಕೇರಿ ಆ.27 :- ವೀರಾಜಪೇಟೆ ತಾಲೂಕು ವ್ಯಾಪ್ತಿಯಲ್ಲಿನ ಹಿರಿಯ ನಾಗರಿಕರಿಗೆ  ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಆಗಸ್ಟ್ 30 ರಂದು ಗೋಣಿಕೊಪ್ಪದ ಆರ್‍ಎಂಸಿ ಯಾರ್ಡ್‍ನಲ್ಲಿ  ನಡೆಯಲಿದೆ.

ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ ಬೋಪಯ್ಯ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದು, ವೀರಾಜಪೇಟೆ ತಾಲೂಕು ಬಿಜೆಪಿ ಅಧ್ಯಕ್ಷ ಕೆ. ಅರುಣ್ ಭೀಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ.  ಮುಖ್ಯ ಅತಿಥಿಗಳಾಗಿ ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷರಾದ ಜಿ.ಟಿ ರಾಘವೇಂದ್ರ, ಜಿ.ಪಂ. ಅಧ್ಯಕ್ಷ ಬಿ.ಎ ಹರೀಶ್,  ಭಾಜಪ ರಾಜ್ಯ ಕಾರ್ಯದರ್ಶಿ ಎ. ಕೆ ಮನುಮುತ್ತಪ್ಪ, ಗೋಣಿಕೊಪ್ಪ ಆರ್.ಎಂ.ಸಿ ಅಧ್ಯಕ್ಷ ಸುವಿನ್ ಗಣಪತಿ, ವೈದ್ಯರಾದ ಡಾ. ಬಿ.ಸಿ ನವೀನ್‍ಕುಮಾರ್, ಗೋಣಿಕೊಪ್ಪ ಗ್ರಾ.ಪಂ ಅಧ್ಯಕ್ಷೆ ಸೆಲ್ವಿ, ಗೋಣಿಕೊಪ್ಪ ಜಿ.ಪಂ ಸದಸ್ಯ ಸಿ.ಕೆ ಬೋಪಣ್ಣ ಉಪಸ್ಥಿತರಿರುವರು ಎಂದು ಹಿರಿಯ ನಾಗರಿಕ  ವೇದಿಕೆ ತಿಳಿಸಿದೆ. ವೃದ್ಧಾಪ್ಯವೇತನ, ಸಂಧ್ಯಾ ಸುರಕ್ಷಾ ಯೋಜನೆ ಹಾಗೂ ನಿರ್ಗತಿಕ  ವಿಧವಾ ವೇತನ ಯೋಜನೆಯ ಫಲಾನುಭವಿಗಳಾಗಲು ಕೆಲವು ದಾಖಲಾತಿಗಳ ಅವಶ್ಯವಿದೆ. ಫಲಾನುಭವಿಗಳಾಗಲು ಇಚ್ಚಿಸುವವರು ದಾಖಲಾತಿಗಳು ಹಾಗೂ ಸಹಾಯಕರೊಂದಿಗೆ ಬರಲು  ಕೋರಿದೆ. ವಿವರಗಳಿಗಾಗಿ ಕೆ. ಅರುಣ್ ಭೀಮಯ್ಯ-9448582462, ಮೂಕೊಂಡ ಶಶಿ ಸುಬ್ರಮಣಿ-9448933287 ಹಾಗೂ ಡಾ. ಬಿ.ಸಿ ನವೀನ್ ಕುಮಾರ್-9844315191 ರನ್ನು ಸಂಪರ್ಕಿಸುವಂತೆ ಕೋರಿದೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: