ಕರ್ನಾಟಕಮೈಸೂರು

ಪಿರಿಯಾಪಟ್ಟಣ ಕಾಲೇಜಿಗೆ ನ್ಯಾಕ್ ತಂಡ ಭೇಟಿ

ಬೈಲಕುಪ್ಪೆ: ಪಿರಿಯಾಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ನ್ಯಾಕ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಉನ್ನತ ಶಿಕ್ಷಣ ಇಲಾಖೆಯ ರಾಷ್ಟ್ರೀಯ ಮೌಲ್ಯಾಂಕ ಮತ್ತು ಮಾನ್ಯತಾ ಮಂಡಳಿ(ನ್ಯಾಕ್) ಸದಸ್ಯರು ಆಗಮಿಸಿದ ಹಿನ್ನೆಲೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೆ. ರಂಗಸ್ವಾಮಿ ಅವರು ಸದಸ್ಯರನ್ನು ಸಾಂಪ್ರದಾಯಿಕ ಮೈಸೂರು ಪೇಟ ತೊಡಿಸಿ ಕಾಲೇಜಿಗೆ ಸ್ವಾಗತಿಸಿದರು.

ಸಮಿತಿಯ ಮುಖ್ಯಸ್ಥರಾಗಿ ಚೆನ್ನೈನ ಭಾರತಿದಾಸನ್ ವಿಶ್ವವಿದ್ಯಾನಿಲಯದ ನಿವೃತ್ತ ಕುಲಪತಿ ಪ್ರೊ. ತಂಗಮುತ್ತು ಮತ್ತು ಉತ್ತರಪ್ರದೇಶದ ದಿನ್‌ದಯಾಳ್ ಉಪಾಧ್ಯಾಯ ವಿಶ್ವವಿದ್ಯಾನಿಲಯದ ಪ್ರಾಧ್ಯಪಕರಾದ ಪ್ರೊ.ಅಜಯ್ ಕೆ. ಗುಪ್ತ, ಮಹಾರಾಷ್ಟ್ರದ ಬ್ರಿಹನ್, ಮಹಾರಾಷ್ಟ್ರ ವಾಣಿಜ್ಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಿ.ಎನ್. ರಾವಲ್ ಮತ್ತು ಡಾ. ಎಂ.ಎಸ್. ಶ್ಯಾಮಸುಂದರ್ ಅವರು ತಂಡದಲ್ಲಿದ್ದರು.

ಮೂರುದಿನಗಳ ಕಾಲದ ಈ ಭೇಟಿಯಲ್ಲಿ ಕಾಲೇಜಿನ ಸಮಗ್ರ ಮಾಹಿತಿ ಸಂಗ್ರಹಿಸಿ ಗ್ರೇಡ್ ನೀಡುವ ಪ್ರಕ್ರಿಯೆ ನಡೆಯಲಿದ್ದು. ಕಾಲೇಜಿನ ವಿವಿಧ ವಿಭಾಗಗಳ ಅಭಿವೃದ್ಧಿ ವಿವರವನ್ನು ಪಡೆಯಲಿರುವ ಸದಸ್ಯರು ಖುದ್ದು ಕಾಲೇಜಿನ ಕಟ್ಟಡ, ದಾಖಲೆಗಳು ಸೇರಿದಂತೆ ವಿವಿಧ ರೀತಿಯ ಪರಿಶೀಲನೆಗಳನ್ನು ನಡೆಸಿದರು.

ಈ ಸಂದರ್ಭ ಕಾಲೇಜಿನ ಎಲ್ಲ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

Leave a Reply

comments

Related Articles

error: