ಮೈಸೂರು

ಮೈಸೂರಿನಲ್ಲಿ ಧಾರಾಕಾರ ಮಳೆ : ಕೆಲವು ಶಾಲೆಗಳಿಗೆ ರಜೆ ಘೋಷಣೆ

ಮೈಸೂರು,ಆ.28:-  ಮೈಸೂರಿನಲ್ಲಿ ಭಾನುವಾರ ರಾತ್ರಿಯಿಂದಲೇ ಎಡೆಬಿಡದೇ ಮಳೆ ಸುರಿಯುತ್ತಿದೆ. ಸೋಮವಾರ ಬೆಳಿಗ್ಗೆಯೂ ಮಳೆ ಮುಂದುವರಿದಿದ್ದು,  ಧಾರಾಕಾರ ಮಳೆ ಹಿನ್ನೆಲೆಯಲ್ಲಿ  ಶಾಲೆಗಳಿಗೆ ತೆರಳಲು ಮಕ್ಕಳು ಪರದಾಡುತ್ತಿರುವ  ಹಿನ್ನೆಲೆಯಲ್ಲಿ  ಪರಿಸ್ಥಿತಿಗೆ ಅನುಗುಣವಾಗಿ ಕೆಲ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಡಿಡಿಪಿಐ ಡಾ.ಡಿ.ಕೆ.ಎಸ್ ವರ್ಧನ್  ಮಳೆಯ ಹಿನ್ನೆಲೆಯಲ್ಲಿ ಕೆಲವು ಶಾಲೆಗಳಿಗೆ ರಜೆ ಘೋಷಣೆ ಮಾಡಿದ್ದಾರೆ. ಮಳೆ ಹೆಚ್ಚಾದ ಪ್ರದೇಶಗಳ ಶಾಲೆಗೆ ಶಾಲಾ ಆಡಳಿತ ಮಂಡಳಿಯ ನಿರ್ಣಯ ಪಡೆದು ರಜೆ ನೀಡಲಾಗಿದೆ. ಇಂದು ರಜೆ ಘೋಷಣೆ ಮಾಡಿರುವ ಶಾಲೆಗಳಿಗೆ ಶನಿವಾರ ಫುಲ್ ಕ್ಲಾಸ್ ತೆಗೆದುಕೊಳ್ಳಲಾಗುವುದು ಎಂದು ತಿಳಿಸಲಾಗಿದೆ. ಬೆಳಿಗ್ಗೆಯಿಂದಲೇ ಸುರಿಯುತ್ತಿರೋ ಮಳೆಗೆ ವಿದ್ಯಾರ್ಥಿಗಳು ಶಿಕ್ಷಕರು ಪರದಾಡುವಂತಾಗಿದೆ.  ಏತನ್ಮಧ್ಯೆ ಎಚ್.ಡಿ.ಕೋಟೆ ತಾಲೂಕಿನಾದ್ಯಂತ ಮಳೆಯ ಹಿನ್ನೆಲೆ ಶಾಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. (ಕೆ.ಎಸ್,ಆರ್.ವಿ,ಎಸ್.ಎಚ್)

Leave a Reply

comments

Related Articles

error: