ಕ್ರೀಡೆ

ಫುಟ್ಬಾಲ್ ಆಟಗಾರ ಅಹ್ಮದ್ ಖಾನ್ ನಿಧನ

ಬೆಂಗಳೂರು,ಆಗಸ್ಟ್.28: ಭಾರತವನ್ನು ಪ್ರತಿನಿಧಿಸಿ ಎರಡು ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಕರ್ನಾಟಕದ ಫುಟ್ಬಾಲ್ ದಂತಕತೆ ಅಹ್ಮದ್ ಖಾನ್ (90 ವರ್ಷ) ನಿನ್ನೆ ನಿಧನರಾದರು.

 

ಅಹ್ಮದ್ ಅವರು ಚಿಕ್ಕಂದಿನಿಂದಲೇ ಫುಟ್ಬಾಲ್ ಆಟದ  ಬಗ್ಗೆ ವಿಶೇಷವಾದ ಆಸಕ್ತಿಯನ್ನು ಹೊಂದಿದ್ದರು. ಅಹ್ಮದ್ ಅವರ ತಂದೆ ಬೆಂಗಳೂರು ಕ್ರೆಸೆಂಟ್ಸ್ ತಂಡದ ಒಡೆತನ ಹೊಂದಿದ್ದರು.ಸೇನೆಯಲ್ಲಿ ಕೆಲಸ ಮಾಡುತ್ತಿದ್ದವರೇ ಹೆಚ್ಚಾಗಿ ತಂಡದಲ್ಲಿ ಆಡುತ್ತಿದ್ದುದರಿಂದ ಅಹ್ಮದ್ ಅವರಿಗೆ ಅವಕಾಶಗಳು ಹೆಚ್ಚು ಸಿಗುತ್ತಿರಲಿಲ್ಲ. ಪಂದ್ಯವೊಂದರ ವೇಳೆ ಆಟಗಾರನೊಬ್ಬ ನಿಗದಿತ ಸಮಯಕ್ಕೆ ಹಾಜರಾಗದ ಕಾರಣ  ತಂಡದಲ್ಲಿ ಆಡುವ ಅವಕಾಶ ಅಹ್ಮದ್ ಅವರಿಗೆ ತಂಡದಲ್ಲಿ ಆಡುವಂತೆ ತಂದೆ ಸೂಚಿಸಿದರು. ಆ ಪಂದ್ಯದಲ್ಲಿ ಅವರು ಮಿಂಚಿನ ಸಾಮರ್ಥ್ಯ ತೋರಿ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಹೀಗೆ ಫುಟ್ಬಾಲ್ ರಂಗಕ್ಕೆ ಅಡಿ ಇಟ್ಟಿದ್ದ ಅಹ್ಮದ್ ಅವರು 1948ರ ಲಂಡನ್ ಒಲಿಂಪಿಕ್ಸ್ನಲ್ಲಿ ಆಡಿ ಸೈ ಎನಿಸಿಕೊಂಡಿದ್ದರು. 1952ರ ಹೆಲ್ಸಿಂಕಿ ಒಲಿಂಪಿಕ್ಸ್ನಲ್ಲೂ ಅವರು ಕಣಕ್ಕಿಳಿದಿದ್ದರು. ಜೊತೆಗೆ 11 ವರ್ಷಗಳ ಕಾಲ ಈಸ್ಟ್ ಬೆಂಗಾಲ್ ತಂಡದ ಪರ ಆಡಿದ್ದರು. ( ಪಿ.ಜೆ)

Leave a Reply

comments

Related Articles

error: