ದೇಶಪ್ರಮುಖ ಸುದ್ದಿ

ಗೋವಾ ಉಪಚುನಾವಣೆಯಲ್ಲಿ ಸಿಎಂ ಮನೋಹರ್ ಪರಿಕ್ಕರ್‍ಗೆ ಗೆಲುವು

ಗೋವಾ, ಆ.28 : ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ವಿಧಾನಸಭೆಯ ಪಣಜಿ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. 4,803 ಮತಗಳ ಅಂತದಿಂದ ಜಯಗಳಿಸಿದ ಪರಿಕ್ಕರ್ ಅವರು 6ನೇ ಅವಧಿಗೆ ಶಾಸಕರಾಗಿ ಆರಿಸಿ ಬಂದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಗಿರೀಶ್ ಚೋಡಾಂಕರ್ 5,059 ಮತಗಳನ್ನು ಪಡೆದರೆ, ಪರಿಕ್ಕರ್ 9862 ಮತಗಳನ್ನು ಪಡೆದು ವಿಜೇತರಾಗಿದ್ದಾರೆ.

ಸೋಮವಾರ ಬೆಳಿಗ್ಗೆ ಆರಂಭವಾದ ಮತ ಎಣಿಕೆಯ ಮೊದಲ ಸುತ್ತಿನಲ್ಲೇ ಮನೋಹರ್ ಪರಿಕ್ಕರ್ ಅವರು ಮುನ್ನಡೆ ಪಡೆದುಕೊಂಡರು. ಫಲಿತಾಂಶ ಹೊರಬಿದ್ದಾಗ ಪರಿಕ್ಕರ್ ನಾಲ್ಕು ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಗಳಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಂತಂತ್ರ ಫಲಿತಾಂಶ ಬಂದ ಕಾರಣ ಕೇಂದ್ರ ರಕ್ಷಣಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಗೋವಾ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಪರಿಕ್ಕರ್ ಅವರು, ಗೋವಾದಲ್ಲಿ ಬಿಜೆಪಿಗೆ ರಾಜಕೀಯ ನಾಯಕತ್ವ ಒದಗಿಸಿದ್ದರು. ಈ ಕಾರಣದಿಂದ ಗೋವಾ ವಿಧಾನಸಭೆ ಪ್ರವೇಶಿಸಿಸಲು ಉಪಚುನಾವಣೆಯಲ್ಲಿ ಕಣಕ್ಕಿಳಿದಿದ್ದರು. ಪರಿಕ್ಕರ್ ಅವರು ರಾಜ್ಯಸಭೆಯ ಸದಸ್ಯರೂ ಆಗಿದ್ದು, ಮುಂದಿನ ವಾರ ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ.

ಗೋವಾ ವಿಧಾನಸಭೆಯ ಮತ್ತೊಂದು ಕ್ಷೇತ್ರ ವಾಲ್ಪೋಯಿಯಿಂದ ಕಣಕ್ಕಿಳಿದಿದ್ದ ಕಾಂಗ್ರೆಸ್‍ನ ಮಾಜಿ ಶಾಸಕ ಬಿ.ಜೆ.ಪಿ. ಅಭ್ಯರ್ಥಿ ವಿಶ್ವಜಿತ್ ರಾಣೆ ಅವರು 10,066 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

-ಎನ್.ಬಿ.

Leave a Reply

comments

Related Articles

error: