ದೇಶ

ಮಣಿಪುರ ಸಿಎಂ ಮೇಲೆ ಗುಂಡಿನ ದಾಳಿ

ಇಂಫಾಲ್: ಮಣಿಪುರ ಸಿಎಂ ಒಕ್ರಾಮ್‍ ಇಬೋಬಿ ಸಿಂಗ್ ಅವರ ಮೇಲೆ ಗುಂಡಿನ ದಾಳಿ ನಡೆದಿದೆ. ಇಬ್ಬರು ಮಣಿಪುರ ಪೊಲೀಸ್ ಪೇದೆಗಳಿಗೆ ಗಾಯವಾಗಿದೆ. ಸಿಎಂ ಒಕ್ರಾಮ್‍ ಅಪಾಯದಿಂದ ಪಾರಾಗಿದ್ದಾರೆ.

ಸೋಮವಾರ ಬೆಳಗ್ಗೆ ಉಖ್ರುಲ್‍ನಲ್ಲಿ ಬಾಂಬ್‍ ಸ್ಫೋಟ ನಡೆದಿದ್ದು, ಪರಿಸ್ಥಿತಿ ವೀಕ್ಷಣೆಗೆಂದು ಸಿಎಂ ಇಬೋಬಿ ಉಪ ಮುಖ್ಯಮಂತ್ರಿಯೊಂದಿಗೆ 9.340ಕ್ಕೆ ಇಂಫಾಲ್‍ನಿಂ‍ದ ಉಖ್ರುಲ್‍ಗೆ ಪ್ರಯಾಣ ಬೆಳೆಸಿದ್ದರು. 10.30ರ ಸುಮಾರಿನಲ್ಲಿ ಹೆಲಿಪ್ಯಾಡ್‍ಗೆ ತಲುಪುತ್ತಿದ್ದಂತೆ ಶಂಕಿತ ಉಗ್ರರು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಿಂದ ಕಂಗೆಟ್ಟ ಸಿಎಂ ಇಬೋಬಿ ವಾಪಸ್ ಇಂಫಾಲ್‍ಗೆ ತೆರಳಿದ್ದಾರೆ.

ಉಖ್ರುಲ್‍ನಲ್ಲಿ ಇತ್ತೀಚಿಗೆ ಕೆಲ ಸ್ಥಳೀಯರು ಸಿಎಂರನ್ನು ಬಹಿಷ್ಕರಿಸಿದ ಹಿನ್ನೆಲೆಯಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ.

Leave a Reply

comments

Related Articles

error: