ಮೈಸೂರು

ನಗರ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಗದ್ದಲ : ಮೇಯರ್ ಆಯುಕ್ತರ ವಿರುದ್ಧ ಸಿಡಿದೆದ್ದ ಸದಸ್ಯರು

ಮೈಸೂರು,ಆ.28:-  ಸೋಮವಾರ ನಡೆದ ನಗರ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಗದ್ದಲವೇರ್ಪಟ್ಟಿದೆ. ನಗರ ಪಾಲಿಕೆ ಸದಸ್ಯರು ಮೇಯರ್ ಆಯುಕ್ತರ ವಿರುದ್ಧ ಸಿಡಿದೆದ್ದಿದ್ದಾರೆ.

ಸಮಸ್ಯೆ ಬಗೆಹರಿಯದಿದ್ದಲ್ಲಿ  ಸಭೆ ಯಾತಕ್ಕೆ ಬೇಕು.  ಸಭೆ  ನಡೆಸೋದು ಬೇಡ, ಸಭೆ ನಿಲ್ಲಿಸಿ ಎಂದು ಪಾಲಿಕೆ ಸದಸ್ಯರು ಆಗ್ರಹಿಸಿದರು. ಯುಜಿಡಿ ಸಮಸ್ಯೆ, ರಸ್ತೆ, ಕುಡಿಯುವ ನೀರಿನ ಸಮಸ್ಯೆ ಸಾಕಷ್ಟಿದೆ. ಅಧಿಕಾರಿಗಳು ಮಾತು ಕೇಳುತ್ತಿಲ್ಲ ಎಂದು ಪಾಲಿಕೆ ಸದಸ್ಯರು ಮೇಯರ್ ವಿರುದ್ಧ ಸಿಡಿದೆದ್ದರು. ಕೆಲಸ ಮಾಡಕ್ಕೆ ಆಗಲ್ಲ ಅಂದರೆ ಸೂಪರ್ ಸೀಡ್ ಮಾಡಿ ಎಂದು ಪಾಲಿಕೆ ಸದಸ್ಯ ಕೆ.ವಿ.ಮಲ್ಲೇಶ್,  ಬಿ.ಎಂ.ನಟರಾಜು, ಫೈರೋಜ್ ಖಾನ್,  ನಂದೀಶ್ ಪ್ರೀತಂ, ಮಹದೇವಪ್ಪ, ಪ್ರಶಾಂತ್ ಗೌಡ   ಎಂದು ಸಭೆಯಲ್ಲಿ ಗರಂ ಆದರು.  ನಿಮ್ ವಾರ್ಡ್ ನಲ್ಲಿ  ಮಾತ್ರ ಕೆಲಸ  ಆಗತ್ತೆ ನಮ್ಮ ವಾರ್ಡ್ ನಲ್ಲಿ ಯಾಕೆ ಆಗುತ್ತಿಲ್ಲ ಎಂದು ಪಾಲಿಕೆ ಸದಸ್ಯ ಕೆಂಪಣ್ಣ ಆಕ್ರೋಶ ವ್ಯಕ್ತಪಡಿಸಿದರು.
ಕೌನ್ಸಿಲ್ ಸಭೆಯಲ್ಲಿ ಮತ್ತೆ ಕಾರಿನ ಸೌಂಡ್ ಕೇಳಿ ಬಂತು. ಪರಿಸರ ಇಂಜಿನಿಯರ್ ಗಳಿಗೆ ಯಾಕೆ ಕಾರು ಬೇಕು, ಪರಿಸರ ಇಂಜಿನಿಯರ್ ಗಳು  ಮಾತ್ರ ಕೆಲಸ ಮಾಡುತ್ತಾರಾ?  ಸ್ಥಾಯಿ ಸಮಿತಿ ಅಧ್ಯಕ್ಷರು ಕೆಲಸ ಮಾಡಲ್ಲವಾ ಎಂದು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಮಹದೇವಪ್ಪ ಪ್ರಶ್ನಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಕೆಲಸದ ಒತ್ತಡ ಇದೆ ಕಾರು ನೀಡಿ ಎಂದು ಮಾಜಿ ಮೇಯರ್ ಶ್ರೀಕಂಠಯ್ಯ ಆಗ್ರಹಿಸಿದರು.

ಸಭೆಯಲ್ಲಿ ಉಪಮೇಯರ್ ಮೇಯರ್ ಎಂ.ಜೆ.ರವಿಕುಮಾರ್, ಆಯುಕ್ತ ಜಿ.ಜಗದೀಶ್, ಉಪಮೇಯರ್ ರತ್ನಲಕ್ಷ್ಮಣ್, ಶಾಸಕ ವಾಸು ಸೇರಿದಂತೆ ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: