ಸುದ್ದಿ ಸಂಕ್ಷಿಪ್ತ

ಯುವ ಜನರಿಗೆ ಸ್ವಚ್ಛತೆ ಕುರಿತು ಪ್ರಬಂಧ, ಕಿರುಚಿತ್ರ ನಿರ್ಮಾಣ ಸ್ಪರ್ಧೆ

ಚಾಮರಾಜನಗರ, ಆ. 28 :- ಕೇಂದ್ರ ಸರ್ಕಾರದ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯವು  ಸ್ವಚ್ಛ ಸಂಕಲ್ಪದಿಂದ ಸ್ವಚ್ಛ ಸಿದ್ಧಿ  ಎಂಬ ಘೋಷಣೆಯಡಿ ಯುವ ಜನರನ್ನು ಸ್ವಚ್ಛತೆ ಬಗ್ಗೆ ತೊಡಗಿಸಿ ಜಾಗೃತಿ ಗೊಳಿಸುವ ಉದ್ದೇಶದಿಂದ ನೆಹರು ಯುವ ಕೇಂದ್ರದ ಮೂಲಕ ಪ್ರಬಂಧ ಹಾಗೂ ಕಿರುಚಿತ್ರ ಸ್ಪರ್ಧೆಯನ್ನು ಏರ್ಪಡಿಸಿದೆ.

ಸ್ವಚ್ಚತೆಗಾಗಿ ನಾನೇನು ಮಾಡುವೇ? ಎಂಬ ಪ್ರಬಂಧ ಸ್ವರ್ಧೆಯನ್ನು ಸೆಪ್ಟಂಬರ್ 1 ರಂದು ಬೆಳಿಗ್ಗೆ 11.30 ಗಂಟೆಗೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದೆ. ಪ್ರಬಂಧವು  250 ಪದಗಳನ್ನು ಮೀರಬಾರದು. ಮೀರಿದಲ್ಲಿ ನಕಾರತ್ಮಕ ಅಂಕಗಳನ್ನು ನೀಡಲಾಗುತ್ತದೆ. ಕನ್ನಡ, ಇಂಗ್ಲೀಷ್‍ ಅಥವಾ ಹಿಂದಿ ಭಾಷೆಯಲ್ಲಿ ಪ್ರಬಂಧ ಬರೆಯಬಹುದು. ನನ್ನದೇಶವನ್ನು ಸ್ವಚ್ಛವಾಗಿಡುವಲ್ಲಿ ನನ್ನಪಾತ್ರ ಎಂಬ 2 ರಿಂದ 3 ನಿಮಿಷಗಳ ಅವಧಿಯ  ಕಿರುಚಿತ್ರವನ್ನು ಚಿತ್ರಿಸಿ ಸೆಪ್ಟಂಬರ್ 4ರೊಳಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ನೆಹರು ಯುವ ಕೇಂದ್ರಕ್ಕೆ ಸಲ್ಲಿಸಬೇಕು. ಕಿರುಚಿತ್ರದ ಉಪಶೀರ್ಷಿಕೆಯು ಇಂಗ್ಲೀಷ್ ಅಥವಾ ಹಿಂದಿ ಭಾಷೆಯಲ್ಲಿ ಇರುವುದು ಉತ್ತಮ. ಕಿರುಚಿತ್ರವನ್ನು ಸ್ಪರ್ಧಿಯೇ ಚಿತ್ರೀಕರಿಸಿರುವ ಬಗ್ಗೆ ಪ್ರಮಾಣಪತ್ರ ಸಲ್ಲಿಸಬೇಕು. ಸ್ಪರ್ಧೆಯಲ್ಲಿ ಮೂವರನ್ನು ಆಯ್ಕೆಮಾಡಿ ನಗದು ಬಹುಮಾನ ಹಾಗೂ ಪ್ರಮಾಣಪತ್ರ ನೀಡಲಾಗುತ್ತದೆ. ಭಾಗವಹಿಸಿದ ಇತರೆ ಸ್ಪರ್ಧಿಗಳಿಗೆ ಪ್ರಮಾಣಪತ್ರ ನೀಡಲಾಗುತ್ತದೆ. ಜಿಲ್ಲಾ ಮಟ್ಟದ ವಿಜೇತರನ್ನು ರಾಜ್ಯ ಮಟ್ಟದ ಸ್ಪರ್ಧೆಗೆ ಕಳುಹಿಸಿಕೊಡಲಾಗುವುದು. ವಿವರಗಳಿಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ನೆಹರು ಯುವ ಕೇಂದ್ರ ದೂರವಾಣಿ ಸಂಖ್ಯೆ 08226-222120 ಸಂರ್ಪಕಿಸುವಂತೆ ತಿಳಿಸಿದೆ. (ಆರ್.ವಿ.ಎಸ್,ಎಸ್.ಎಚ್)

 

 

Leave a Reply

comments

Related Articles

error: