ಪ್ರಮುಖ ಸುದ್ದಿ

ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ: ಧ್ರುವನಾರಾಯಣ್

ಪ್ರಮುಖ ಸುದ್ದಿ, ತಿ.ನರಸೀಪುರ, ಆ.೨೮: ಐದು ವರ್ಷಗಳ ಅವಧಿಗೆ ಕಳಂಕರಹಿತವಾಗಿ ಭ್ರಷ್ಟಾಚಾರಮುಕ್ತ ಆಡಳಿತ ನೀಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನರಿಗೆ ಸ್ಥಿರ ಸರ್ಕಾರವನ್ನು ನೀಡಿರುವುದರಿಂದ ಮುಂದಿನ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿಯೂ ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರಲಿದೆ ಎಂದು ಸಂಸದ ಆರ್.ಧ್ರುವನಾರಾಯಣ್ ಹೇಳಿದರು.

ತಾಲೂಕಿನ ಮೂಗೂರು ಗ್ರಾಮದಲ್ಲಿ ೫೦ ಲಕ್ಷ ರೂಗಳ ವೆಚ್ಚದ ಕನಕ ಸಮುದಾಯ ಭವನ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಚಾಲನೆ ನೀಡಿದ ನಂತರ ಮಾತನಾಡಿ, ಹಿಂದಿನ ಸರ್ಕಾರದಲ್ಲಿ ಮೂವರು ಮುಖ್ಯಮಂತ್ರಿಗಳಾಗಿದ್ದರು. ಬಿಜೆಪಿ ಪಕ್ಷದಲ್ಲಿನ ಆಂತರಿಕ ಭಿನ್ನಮತ ಬೂದಿಮುಚ್ಚಿದ ಕೆಂಡದಂತಿದೆ. ಜಾತ್ಯಾತೀತ ಜನತಾದಳ ಕೆಲವು ಜಿಲ್ಲೆಗಳಿಗಷ್ಟೇ ಸಿಮೀತವಾದ ಪಕ್ಷವಾಗಿದೆ. ಸ್ಥಿರ ಸರ್ಕಾರವನ್ನು ಕಾಂಗ್ರೆಸ್‌ನಿಂದ ಮಾತ್ರ ನೀಡಲು ಸಾಧ್ಯವಾಗಿದ್ದರಿಂದ ಸಿಎಂ ನಾಯಕತ್ವದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತವೆಂದು ಭವಿಷ್ಯ ನುಡಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಹಾಗೂ ಜಿ.ಪಂ ಮಾಜಿ ಸದಸ್ಯ ಎಂ.ಆರ್.ಸೋಮಣ್ಣ, ಚಾ.ನಗರ ಎಪಿಎಂಸಿ ಮಾಜಿ ಅಧ್ಯಕ್ಷ ಆಲ್ದೂರು ಸಿ.ರಾಜಶೇಖರ, ಜಿ.ಪಂ ಮಾಜಿ ಸದಸ್ಯ ಎಂ.ಆರ್.ಸೋಮಣ್ಣ, ಪಿಎಸಿಸಿಎಸ್ ಮಾಜಿ ಅಧ್ಯಕ್ಷ ಎಂ.ಆರ್.ಸುಂದರ್, ಗ್ರಾ.ಪಂ ಸದಸ್ಯ ಶಿವು, ಗ್ರಾ.ಪಂ ಮಾಜಿ ಅಧ್ಯಕ್ಷ ವಾಟಾಳ್ ನಾಗೇಶ, ಮಾಜಿ ಸದಸ್ಯರಾದ ಪುಟ್ಟಮಾದಯ್ಯ, ಜಯಶಂಕರ, ಮಹದೇವನಾಯಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

 

Leave a Reply

comments

Related Articles

error: