ಪ್ರಮುಖ ಸುದ್ದಿಮೈಸೂರು

ದಸರಾ ಮಹೋತ್ಸವ: ಸಿಂಗಲ್ ಟಿಕೆಟಿಂಗ್ ಸಿಸ್ಟಂ ಜಾರಿ; ಚೆನ್ನೈ-ಮೈಸೂರು ನಡುವೆ ವಿಮಾನ ಸಂಚಾರ ಆರಂಭ: ಡಿಸಿ ರಂದೀಪ್

ಮೈಸೂರು,ಆ.28-ದಸರಾ ಮಹೋತ್ಸವ ಸಂದರ್ಭದಲ್ಲಿ ಪ್ರವಾಸಿ ತಾಣಗಳಿಗೆ ಸಿಂಗಲ್ ಟಿಕೆಟಿಂಗ್ ಸಿಸ್ಟಂ ಜಾರಿಗೆ ತರಲಾಗುವುದು. ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ, ಕಾರಂಜಿಕೆರೆ ಮತ್ತು ಕೆ.ಆರ್.ಎಸ್.ಗೆ ಒಂದೇ ಟಿಕೆಟ್ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ಹೇಳಿದ್ದಾರೆ.

ಪ್ರವಾಸಿ ತಾಣಗಳಿಗೆ ತೆರಳಲು ಒಂದೇ ಟಿಕೆಟ್ ಪಡೆಯಲು ಬುಕ್ ಮೈ ಶೋ ಮೂಲಕ ಆನ್ ಲೈನ್ ನಲ್ಲೂ ಟಿಕೆಟ್ ಬುಕ್ ಮಾಡಲು ಅವಕಾಶವಿದೆ. ದಸರಾ ಗೋಲ್ಡ್ ಕಾರ್ಡ್ಅನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು. ಗೋಲ್ಡ್ ಕಾರ್ಡ್ ನಲ್ಲಿ ಒಬ್ಬರಿಗೆ ಮಾತ್ರ ಪ್ರವೇಶವಕಾಶವಿದ್ದು, ಕಾರ್ಡ್ ನ ದರವನ್ನು 7 ಸಾವಿರ ರೂ. ಬದಲು ಕಡಿಮೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಶೀಘ್ರವೇ ಗೋಲ್ಡ್ ಕಾರ್ಡ್ ನ ದರವನ್ನು ನಿಗದಿ ಪಡಿಸಲಾಗುವುದು ಎಂದರು.

ದಸರಾ ಮಹೋತ್ಸವದ ಅಂಗವಾಗಿ ಮೈಸೂರಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುವ ಹಿನ್ನೆಲೆಯಲ್ಲಿ ಪ್ರವಾಸಿಗರ ಅನುಕೂಲಕ್ಕೆ ಚೆನ್ನೈ ಮತ್ತು‌ ಮೈಸೂರು ಮಧ್ಯೆ ವಿಮಾನ ಸಂಚಾರ ಆರಂಭಿಸಲಾಗುವುದು. ದಸರೆಗೆ ಮುನ್ನ ವಿಮಾನ ಸಂಚಾರ ಆರಂಭವಾಗುವ ಸಾಧ್ಯತೆಯಿದ್ದು, ಟ್ರೂ ಜೆಟ್ ಸಂಸ್ಥೆ ವಿಮಾನ ಸಂಚಾರಕ್ಕೆ ಆಸಕ್ತಿ ತೋರಿದೆ ಎಂದಿದ್ದಾರೆ. (ವರದಿ-ಆರ್.ವಿ, ಎಂ.ಎನ್)

Leave a Reply

comments

Related Articles

error: