ಮೈಸೂರು

ಆ.29ರಂದು ‘ಸಂಯಮ ಪ್ರಶಸ್ತಿ’ ಪ್ರಧಾನ ಸಮಾರಂಭ

ಮೈಸೂರು,ಆ.28 : ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಜಿಲ್ಲಾಡಳಿತ, ಜಿ.ಪಂ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ‘ಸಂಯಮ ಪ್ರಶಸ್ತಿ’ ಪ್ರಧಾನ ಸಮಾರಂಭವನ್ನು ಆ.29ರಂದು ಮಧ್ಯಾಹ್ನ 12.30ಕ್ಕೆ ಕಲಾಮಂದಿರದಲ್ಲಿ ಆಯೋಜಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸುವರು, ಶಾಸಕ ವಾಸು ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಸಚಿವ ತನ್ವೀರ್ ಸೇಠ್, ಸಂಸದರಾದ ಪ್ರತಾಪ ಸಿಂಹ, ಧ್ರುವನಾರಾಯಣ್, ಸಿ.ಎಸ್.ಪುಟ್ಟರಾಜು, ಮೇಯರ್ ಎಂ.ಜೆ.ರವಿಕುಮಾರ್, ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ, ಜಿ.ಪಂ.ಅಧ್ಯಕ್ಷೆ ನಯಿಮಾ ಸುಲ್ತಾನ್ ನಜೀರ್ ಅಹಮದ್, ಶಾಸಕರಾದ ಹೆಚ್.ಪಿ.ಮಂಜುನಾಥ್, ಕೆ.ವೆಂಕಟೇಶ್, ಎಂ.ಕೆ.ಸೋಮಶೇಖರ್, ಜಿ.ಟಿ.ದೇವೇಗೌಡ, ಎಸ್.ಚಿಕ್ಕಮಾದು, ಸಾ.ರಾ.ಮಹೇಶ್ , ಕಳಲೆ ಎನ್.ಕೇಶವಮೂರ್ತಿ ಇವರೊಂದಿಗೆ ವಿಧಾನ ಪರಿಷತ್ ಸದಸ್ಯರು, ನಿಗಮ ಮಂಡಳಿ ಅಧ್ಯಕ್ಷರು ಮೊದಲಾದ ಜನಪ್ರತಿನಿಧಿಗಳು ಪಾಲ್ಗೊಳ್ಳುವರು.

ಮನೋ ವೈದ್ಯ ಡಾ.ಸಿ.ಆರ್.ಚಂದ್ರಶೇಖರ್,  ಹುಣಸೂರಿನ ಬೆಳಕು ಸಂಸ್ಥೆಯ ನಿಂಗರಾಜ ಮಲ್ಲಾಡಿ, ತುಮಕೂರಿನ ಅಚರ್ಡ್ ಸಂಸ್ಥೆಯ ಡಾ.ಹೆಚ್.ಜಿ.ಸದಾಶಿವಯ್ಯ ಇವರುಗಳಿಗೆ ಸಂಯಮ ಪ್ರಶಸ್ತಿ ನೀಡಿ ಪುರಸ್ಕಾರಿಸಲಾಗುವುದು. (ಕೆ.ಎಂ.ಆರ್)

Leave a Reply

comments

Related Articles

error: