ದೇಶಪ್ರಮುಖ ಸುದ್ದಿ

ಡಿಸೆಂಬರ್ ವೇಳೆಗೆ ಬಿಡುಗಡೆಯಾಗಲಿದೆ ಹೊಸ 1000 ರೂ. ನೋಟು ?

ನವದೆಹಲಿ, ಆ.28 : ಹೊಸ 50 ರೂ. ಮತ್ತು 200 ರೂಪಾಯಿ ನೋಟುಗಳು ಇನ್ನೂ ಎಲ್ಲ ಜನರ ಕೈಸೇರಿಲ್ಲ. ಇದರ ಜೊತೆಗೆ ಸದ್ಯದಲ್ಲೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸ 1000 ರೂಪಾಯಿ ನೋಟು ಬಿಡುಗಡೆಗೆ ತಯಾರಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ವರ್ಷದ ನವೆಂಬರ್ 8ರಂದು ಹಳೆಯ 500 ಮತ್ತು 1000 ರೂ. ನೋಟುಗಳನ್ನು ರದ್ದು ಮಾಡಿತ್ತು. 500 ರೂ.ಗಳ ಹೊಸ ನೋಟುಗಳನ್ನು ತಕ್ಷಣ ಬಿಡುಗಡೆ ಮಾಡಿದ ರಿಸರ್ವ್ ಬ್ಯಾಂಕ್, ಹೊಸ 1000 ರೂ. ನೋಟು ಬಿಡುಗಡೆ ಮಾಡಲು ಸದ್ಯ ತಯಾರಿ ನಡೆಸುತ್ತಿದೆ. ಡಿಸೆಂಬರ್ ವೇಳೆಗೆ ಹೊಸ 1000 ರೂಪಾಯಿ ನೋಟು ಬಿಡುಗಡೆ ಮಾಡುವ ಸಾಧ್ಯತೆ ಇದ್ದು, ಹೊಸ ನೋಟುಗಳಲ್ಲಿ ಹೆಚ್ಚಿನ ಭದ್ರತಾ ಲಕ್ಷಣಗಳು ಒಳಗೊಂಡಿವೆ. ಮೈಸೂರು ಹಾಗೂ ಸಲ್ಬೋಲಿಯಲ್ಲಿ ಹೊಸ 1000 ರೂ. ನೋಟುಗಳ ಮುದ್ರಣಕ್ಕೆ ಸಿದ್ಧತೆ ನಡೆಯುತ್ತಿದೆ.

ಪ್ರಸ್ತುತ 500 ರೂ. ನೋಟುಗಳನ್ನು ಬಿಟ್ಟರೆ 2000 ರೂ. ಮುಖಬೆಲೆಯ ನೋಟುಗಳು ಮಾತ್ರ ಚಲಾವಣೆಯಲ್ಲಿವೆ. ಇವುಗಳ ನಡುವಣ ಅಂತರ ಸರಿದೂಗಿಸಲು ಮತ್ತು ಜನರ ನಗದು ಬೇಡಿಕೆ ಪೂರೈಸಲು ಆರ್‍ಬಿಐ ಹೊಸ 1000 ರೂ. ಮುಖಬೆಲೆಯ ನೋಟನ್ನು ಚಲಾವಣೆಗೆ ತರುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ವದಂತಿ ಬಗ್ಗೆ ಆರ್‍ಬಿಐ ಯಾವುದೇ ಮಾಹಿತಿ ನೀಡಿಲ್ಲ.

-ಎನ್.ಬಿ.

Leave a Reply

comments

Related Articles

error: