ಮೈಸೂರು

ಶಿಕ್ಷಣ ಪದ್ದತಿಯಲ್ಲಿ ವೈಜ್ಞಾನಿಕ, ಮೌಲ್ಯಾಧಾರಿತ ತತ್ವಗಳನ್ನು ಅಳವಡಿಸಿಕೊಳ್ಳಿ: ಪಿ. ದೇವಕುಮಾರ್

ಸಿದ್ದಾರ್ಥನಗರದ ಕೇಂದ್ರೀಯ ವಿದ್ಯಾಲಯದಲ್ಲಿ ಅ.24 ರಂದು ನಡೆದ 24ನೇ ಪ್ರಾಂತೀಯ ಮಕ್ಕಳ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ಸಮಾವೇಶವನ್ನು ಕೇಂದ್ರೀಯ ವಿದ್ಯಾಲಯ ಸಂಘಟನೆಯ ಬೆಂಗಳೂರು ಪ್ರಾಂತ್ಯದ ಉಪ ಆಯುಕ್ತ ಪಿ. ದೇವಕುಮಾರ್ ಉದ್ಘಾಟಿಸಿದರು. ನಂತರ ಮಕ್ಕಳು ಮತ್ತು ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದಿನ ಶಿಕ್ಷಣ ಪದ್ದತಿಯಲ್ಲಿ ವೈಜ್ಞಾನಿಕ ಹಾಗೂ ಮೌಲ್ಯಾಧಾರಿತ ತತ್ವಗಳನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.

ನಂತರ ಮೈಸೂರಿನ ಪ್ರಖ್ಯಾತ ಸಂಸ್ಥೆಗಳಾದ ಡಿಎಫ್ಆರ್ ಎಲ್, ಸಿಎಫ್‍ಟಿಆರ್‍ಐ, ಆರ್‍ಐಈ, ಆರ್‍ಎಂಎನ್‍ಎಚ್, ಪುರಾತತ್ವ ಇಲಾಖೆಯಿಂದ ಬಂದಂತಹ ನಿರ್ಣಾಯಕರು ಯೋಜನೆಗಳನ್ನು ನಿರ್ಣಯಿಸಿದರು. ತದನಂತರ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಶಾಲೆಯ ಪ್ರಾಂಶುಪಾಲೆ ನಿರ್ಮಲ ಕುಮಾರಿ ಎಂ., ಡಿ.ವೆಂಕಟೇಶ್ವರಾಲು, ಪಿ.ದೇವಕುಮಾರ್ ಮತ್ತಿತರರು ಹಾಜರಿದ್ದರು.

science-1

 

Leave a Reply

comments

Related Articles

error: