ಸುದ್ದಿ ಸಂಕ್ಷಿಪ್ತ

ದೇವರಾಜ ಮಾರುಕಟ್ಟೆ ಕಟ್ಟಡದ ಮೂಲ ನಕ್ಷೆ ಬಿಡುಗಡೆಗೆ ಮನವಿ

ದೇವರಾಜ ಮಾರುಕಟ್ಟೆ ಮತ್ತು ಲಾನ್ಸ್^ಡೌನ್ ಕಟ್ಟಡಗಳನ್ನು ಕೆಡವಿ ಹೊಸದಾಗಿ ಮಾಡುವ ಮುನ್ನ ಮೂಲ ನಕ್ಷೆ ಸಹಿತ ತಜ್ಞರ ಸಮಿತಿಯ ಸಂಪೂರ್ಣ ವದರಿಯನ್ನು ಸಾರ್ವಜನಿಕರ ಪರಿಶೀಲನೆಗಾಗಿ ಬಿಡುಗಡೆ ಮಾಡಬೇಕೆಂದು ಜನಮನರಂಗದ ಅಧ್ಯಕ್ಷ ಸಿ.ಪಿ. ತಮ್ಮಣ್ಣ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.ತಾವು ಯದುವಂಶದ ದೊರೆಗಳ ಅಭಿಮಾನಿಯಾಗಿದ್ದು, ಈ ಕಟ್ಟಡಗಳ ಭೂಸ್ವಾಧೀನ ಸಮಯದಲ್ಲಿ “ಸಾರ್ವಜನಿಕ ಸದುದ್ದೇಶಕ್ಕೆಂದು” ಪ್ರಕಟಿಸಿ ಭೂಸ್ವಾಧೀನ ಮಾಡಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಕಟ್ಟಡಗಳನ್ನು ನೆಲಸಮ ಮಾಡುವಾಗಲೂ ಇದೇ ಉದ್ದೇಶ ನೀಡುತ್ತಿರುವುದರಿಂದ ಸರ್ಕಾರವು ಮೂಲ ನಕ್ಷೆ ಮತ್ತು ತಜ್ಞರ ವರದಿಯನ್ನು ಮಾಧ್ಯಮಗಳಲ್ಲಿ ಜಾಹೀರಾತು ಮೂಲಕ ತಿಳಿಸಬೇಕು ಎಂದು ಅವರು ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.

Leave a Reply

comments

Related Articles

error: