ಮೈಸೂರುಸುದ್ದಿ ಸಂಕ್ಷಿಪ್ತ

ವೈದ್ಯರಿಗಾಗಿ ಮುಂದುವರಿದ ಶಿಕ್ಷಣ ಕಾರ್ಯಕ್ರಮ

ಭಾರತೀಯ ವೈದ್ಯಕೀಯ ಸಂಘ ಮೈಸೂರು ಶಾಖೆ ಹಾಗೂ ಅನ್ನಪೂರ್ಣ ಕಣ್ಣಿನ ಆಸ್ಪತ್ರೆ, ಮೈಸೂರು – ಇವರ ಸಹಯೋಗದೊಂದಿಗೆ ಇತ್ತೀಚೆಗೆ ಮೈಸೂರಿನ ಹೊಟೆಲ್ ಪೈ-ವಿಸ್ತಾದಲ್ಲಿ ವೈದ್ಯರಿಗಾಗಿ ಮೈಸೂರಿನ ‘ಅನ್ನಪೂರ್ಣ ಕಣ್ಣಿನ ಆಸ್ಪತ್ರೆ’ಯ ನೇತ್ರ ತಜ್ಞರಾದ ಡಾ. ಮನೋಜ್ ಟಿ. ಅವರಿಂದ ‘ಕರಂಟ್ ಸ್ಟೇಟ್ ಆಫ್ ಕೇರ್ ಫಾರ್ ಡಯಾಬಿಡಿಕ್ ರೆಟಿನೋಪಥಿ ಇನ್ ಇಂಡಿಯಾ” ವಿಷಯದ ಕುರಿತು ಮುಂದುವರಿದ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

(ಎಡದಿಂದ ಬಲಕ್ಕೆ) ಡಾ. ಮನೋಜ್ ಟಿ, ಭಾರತೀಯ ವೈದ್ಯಕೀಯ ಸಂಘ ಮೈಸೂರು ಶಾಖೆಯ ಖಜಾಂಚಿ ಡಾ. ಜಿ.ಆರ್. ಜಗನ್ನಾಥ ಬಾಬು, ಭಾರತೀಯ ವೈದ್ಯಕೀಯ ಸಂಘದ ಮೈಸೂರು ಶಾಖೆಯ ಉಪಾಧ್ಯಕ್ಷರಾದ ಡಾ. ಬಿ.ಎನ್. ಆನಂದ ರವಿ, ಮಯಸೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ವೈದ್ಯಕೀಯ ಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾದ ಡಾ. ಮೊಹಮ್ಮದ್ ಘೋಷ್ ಷರೀಫ್, ಭಾರತೀಯ ವೈದ್ಯಕೀಯ ಸಂಘ ಮೈಸೂರು ಶಾಖೆಯ ಕಾರ್ಯದರ್ಶಿಗಳಾದ ಡಾ. ಸುರೇಶ್ ರುದ್ರಪ್ಪ ಉಪಸ್ಥಿತರಿದ್ದರು.

Leave a Reply

comments

Related Articles

error: