ಮೈಸೂರು

ಪುರುಷರನ್ನು ಪರಿಚಯಿಸಿಕೊಂಡು ಹಣ ಕಿತ್ತು ವಂಚಿಸುತ್ತಿದ್ದ ಯುವತಿಯ ಬಂಧನ

ಮೈಸೂರು,ಆ.29:- ಪುರುಷರನ್ನು ಪರಿಚಯಿಸಿಕೊಂಡು ಅವರನ್ನು ಹಣಕ್ಕಾಗಿ ಪೀಡಿಸುತ್ತಿದ್ದ ಯುವತಿಯೋರ್ವಳನ್ನು ದಕ್ಷಿಣ ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತಳನ್ನು ಅಶೋಕಪುರಂ ನಿವಾಸಿ ಮಾಲಾ ಎಂದು ಗುರುತಿಸಲಾಗಿದೆ. ಜೆ.ಪಿ.ನಗರದ ವ್ಯಕ್ತಿಯೋರ್ವರು ಬಸ್ ರಸ್ತೆಯಲ್ಲಿ ಹೋಗುತ್ತಿದ್ದಾಗ ಅವರನ್ನುನೋಡಿ ನಸುನಕ್ಕಿದ್ದ ಮಾಲಾಳಿಗೆ ಅವರ ಮೊಬೈಲ್ ಸಂಖ್ಯೆಯನ್ನು ನೀಡಿ ಬಂದಿದ್ದರು. ನಂತರ ಆಕೆ ಮೊಬೈಲ್ ನಲ್ಲಿ ಆಗಾಗ ಕರೆ ಮಾಡಿ ಮಾತನಾಡುತ್ತಿದ್ದಳಲ್ಲದೇ ನಿಮ್ಮ ಜೊತೆ ಮಾತನಾಡಬೇಕು ಇಂಥಹ ಸ್ಥಳಕ್ಕೆ ಬನ್ನಿ ಎಂದು ಅವಳು ನಿಗದಿಪಡಿಸಿದ ಸ್ಥಳಕ್ಕೆ ಕರೆಯಿಸಿ, ತನಗೆ ಪರಿಚಯವಿದ್ದ ಹುಡುಗರಿಂದ ಅವರನ್ನು ಅಪಹರಣಗೊಳಿಸಿದ್ದಲ್ಲದೇ ಆ ಹುಡುಗರು ವ್ಯಕ್ತಿಯನ್ನು ಹಿಗ್ಗಾಮುಗ್ಗಾ ಥಳಿಸಿ ಖಾಲಿ ಚೆಕ್ ಗೆ ಸಹಿ ಹಾಕಿಸಿಕೊಂಡಿದ್ದರು. ಈ ಕುರಿತು ನೊಂದ ವ್ಯಕ್ತಿ ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಆಕೆಯ ಬಂಧನಕ್ಕೆ ತಂಡವನ್ನು ರಚಿಸಿ ಕೊನೆಗೂ ಆಕೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿಂದೆ ಹಲವರಿಗೆ ಈ ರೀತಿ ಮಾಡಿದ್ದು ಆದರೆ ಅವರು ಮರ್ಯಾದೆಯ ಹಿನ್ನೆಲೆಯಲ್ಲಿ ದೂರು ನೀಡಲು ಹಿಂಜರಿದಿದ್ದರು ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: