ಸಿಟಿ ವಿಶೇಷ

ಸೆ.1ರಂದು ಶ್ರೀಮದ್ಭಗವದ್ಗೀತಾ ಕಂಠಪಾಠ ಸ್ಪರ್ಧೆ

ಮೈಸೂರು,ಆ.29 : ಸದ್ವಿದ್ಯಾ ಶಿಕ್ಷಣ ಸಂಸ್ಥೆಯಿಂದ ನಗರಮಟ್ಟದ ಅಂತರ ಶಾಲಾ ಶ್ರೀಮದ್ಭಗವದ್ಗೀತಾ ಕಂಠಪಾಠ ಸ್ಪರ್ಧೆಯನ್ನು ಸೆ.1ರ ಆಯೋಜಿಸಿದೆ.

ಆಡಳಿತ ಮಂಡಳಿ ಸದಸ್ಯ ಸಿ.ಆರ್.ನಾಗರಾಜ್ ಅವರು ಬೆಳಗ್ಗೆ 9.30ಕ್ಕೆ ಉದ್ಘಾಟಿಸುವರು, ತೀರ್ಪುಗಾರರಾಗಿ ವಿದ್ವಾನ್ ಶ್ರೀಪಾದ ಭಟ್, ಡಿ.ಬನುಮಯ್ಯ ವಾಣಿಜ್ಯ ಮತ್ತು ಕಲಾ ಕಾಲೇಜಿನ ಪ್ರೊ.ಸುರೇಶ್, ಡಾ.ಸುರೇಶ್ ಹೆಗಡೆ ಮೊದಲಾದವರು ಆಗಮಿಸುವರು.

ಸಂಜೆ  3ಗಂಟೆಗೆ ನಡೆಯುವ ಬಹುಮಾನ ವಿತರಣಾ ಸಮಾರಂಭದಲ್ಲಿ ಉಡುಪಿ ಭಂಡಾರಕೇರಿ ಮಠಾಧೀಶ ಶ್ರೀವಿದ್ಯೇಶತೀರ್ಥ ಶ್ರೀಪಾದಂಗಳು ಅಶೀರ್ವಚನ ನೀಡುವರು. ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಂ.ಡಿ.ಗೋಪಿನಾಥ್ ಅಧ್ಯಕ್ಷತೆ ವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: