ಕರ್ನಾಟಕ

ಕೆರೆ ಅಭಿವೃದ್ದಿಯಲ್ಲಿ ಶಾಸಕರ ಕೊಡುಗೆ ಶೂನ್ಯ : ಕಿನಕಹಳ್ಳಿ ಬಸವಣ್ಣ ಆರೋಪ

ರಾಜ್ಯ(ಚಾಮರಾಜನಗರ)ಆ.29:- ಅಗರ ಗ್ರಾಮದ ಕೆರೆ ಅಭಿವೃದ್ದಿಗೆ ಲಕ್ಷಾಂತರ ಹಣ ವೆಚ್ಚ ಮಾಡಲಾಗಿದೆ ಎಂದು ಸಭೆ ಸಮಾರಂಭಗಳಲ್ಲಿ ಬೊಬ್ಬೆ ಹೊಡೆಯುವ ಶಾಸಕ ಎಸ್.ಜಯಣ್ಣ, ಎಲ್ಲಿ ಕೆರೆ ಅಭಿವೃದ್ದಿಪಡಿಸಿದ್ದಾರೆ ಎಂಬುವುದರ ಬಗ್ಗೆ ಅವರ ಅಧಿಕಾರಿಗಳ ಜೊತೆ ಕಾಮಗಾರಿ ನಡೆದ ಸ್ಥಳ ತೋರಿಸಬೇಕು ಹಾಗೂ ಸಕಾಲದಲ್ಲಿ ಸೂಕ್ತ ಮಾಹಿತಿ ನೀಡದಿದ್ದರೆ ರೈತರು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಕರ್ನಾಟಕ ರೈತ ಸಂಘದ ಮುಖಂಡ ಹಾಗೂ ಅಗರ ಕೆರೆ ನೀರು ಬಳಕೆದಾರರ ಸಂಘದ ಉಪಾಧ್ಯಕ್ಷ ಕಿನಕಹಳ್ಳಿ ಬಸವಣ್ಣ ಎಚ್ಚರಿಕೆ ನೀಡಿದ್ದಾರೆ.

ಅವರು ತಾಲೂಕಿನ ಅಗರ ಗ್ರಾಮದ ಕೆರೆಗೆ ನೀರಾವರಿ ಇಲಾಖೆ ಅಧಿಕಾರಿಗಳ ಜೊತೆಯಲ್ಲಿ ಕೆರೆ ವೀಕ್ಷಣೆ ಮಾಡಿ ಮಾತನಾಡಿ ಅಗರ ಗ್ರಾಮದ ಕೆರೆ 999 ಎಕರೆ ಪ್ರದೇಶ ವಿಸ್ತೀರ್ಣ ಹೊಂದಿದೆ. ಕೆರೆ ನೀರು ತುಂಬಿದರೆ 10 ರಿಂದ 12 ಸಾವಿರ ಎಕರೆ ಪ್ರದೇಶಕ್ಕೆ ನೀರು ಉಣಿಸುವ ಜೀವ ಕೆರೆಯಾಗಿದೆ ಎಂದ ಅವರು ಕೆರೆಯ ನಾಲ್ಕು ದಿಕ್ಕುಗಳಲ್ಲಿ ಜಮೀನುಗಳಿಗೆ ನೀರು ಪೂರೈಕೆ ಮಾಡುವ ತೂಬುಗಳ ದುರಸ್ತಿಪಡಿಸಲಾಗಿದೆ ಎಂದು ಸಾರ್ವಜನಿಕವಾಗಿ ಮಾಹಿತಿ ನೀಡುತ್ತಿದ್ದಾರೆ. ನಾಡುದೇಶದ ಕೂಟಕ್ಕೆ ಸೇರಿರುವ ಕೆರೆ ಅಭಿವೃದ್ದಿ ಪಡಿಸದೇ ಹೋದರೂ, ಅನಗತ್ಯವಾಗಿ ರಾಜಕಾರಣ ಲಾಭ ಪಡೆದುಕೊಳ್ಳಲು ಶಾಸಕರು ಬೆಂಬಲಿಗರ ಮುಖಾಂತರ ಪತ್ರಿಕೆಗಳಿಗೆ ಸುಳ್ಳು ಮಾಹಿತಿ ಕೊಡಿಸಿದ್ದಾರೆ ಎಂದು ಆರೋಪಿಸಿದರು.

ಅಗರ ಗ್ರಾಮದ ಕೆರೆಯನ್ನು ಅಬಿವೃದ್ದಿಪಡಿಸುವ ಉದ್ದೇಶದಿಂದ ಮಾಂಬಳ್ಳಿ ನಂಜುಂಡಸ್ವಾಮಿ ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿ.ಸೋಮಣ್ಣ ಮತ್ತು ನೀರಾವರಿ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿರನ್ನು ಕರೆದುಕೊಂಡು ಅಗರ ಕೆರೆ ಪರಿಶೀಲನೆ ನಡೆಸಿ ಕೆರೆ ಅಭಿವೃದ್ದಿಗೆ ಬೇಕಾದ ಅಗತ್ಯ ಅನುದಾನವನ್ನು ಮಂಜೂರಾತಿ ಮಾಡಿ 3.37 ಕೋಟಿ ರೂ ವೆಚ್ಚದಲ್ಲಿ ಅಂದಾಜು ಪಟ್ಟಿ ತಯಾರಿಸಿ ಕಾಮಗಾರಿ ಪ್ರಾರಂಭಿಸಲು ಟೆಂಡರ್ ಕರೆಯಲಾಗಿತ್ತು. ಆದರೆ ಅಸೆಂಬ್ಲಿ ಚುನಾವಣೆ ಬಂದಿದ್ದರಿಂದ ಕಾಮಗಾರಿ ವಿಳಂಬವಾಯಿತು ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಅಗರ ರಾಜು, ಬಾಬು, ಪ್ರಸಾದ್, ನಾಗರಾಜು ಸೇರಿದಂತೆ ಇತರರು ಹಾಜರಿದ್ದರು.(ಜಿ.ಎನ್,ಎಸ್.ಎಚ್)

Leave a Reply

comments

Related Articles

error: