ದೇಶಪ್ರಮುಖ ಸುದ್ದಿವಿದೇಶ

ಸೆ. 3-7: ಚೀನಾ, ಮ್ಯಾನ್ಮಾರ್ ಪ್ರವಾಸಕ್ಕೆ ತೆರಳಲಿರುವ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಆಗಸ್ಟ್ 29 (ಪ್ರಮುಖ ಸುದ್ದಿ) : ಪ್ರಧಾನಿ ನರೇಂದ್ರ ಮೋದಿಯವರು ಸೆ.3-7 ರವರೆಗೆ ಚೀನಾ ಮತ್ತು ಮ್ಯಾನ್ಯಾರ್ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಚೀನಾ ಅಧ್ಯಕ್ಷರ ಆಹ್ವಾನ ಸ್ವೀಕರಿಸಿರುವ ಮೋದಿ, ಚೀನಾದ ‍‍ಫ್ಯುಜಿಯನ್ ಪ್ರಾಂತ್ಯದ ಕ್ಸಿಯಮೆನ್‍ ನಗರದಲ್ಲಿ ನಡೆಯಲಿರುವ 5ನೇ ಬ್ರಿಕ್ಸ್ ರಾಷ್ಟ್ರಗಳ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ.

ಬ್ರಿಕ್ಸ್ ಸಮ್ಮೇಳನದಲ್ಲಿ ಭಾಗವಹಿಸಿದ ನಂತರ ಸೆ.5-7ರ ವರೆಗೆ ಭಾರತದ ಮತ್ತೊಂದು ನೆರೆಯ ದೇಶ ಮ್ಯಾನ್ಮಾರ್’ಗೆ ಅಧಿಕೃತ ಭೇಟಿ ನೀಡಲಿದ್ದಾರೆ. ಅಲ್ಲಿನ ಅಧ್ಯಕ್ಷ ಯು ಹಿನ್ ಕ್ವಾ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಪ್ರಧಾನಿ ಮೋದಿಯವರು ಮ್ಯಾನ್ಯಾರ್’ಗೆ ಅಧಿಕೃತ ಭೇಟಿ ನೀಡುತ್ತಿರುವುದು ಇದೇ ಮೊದಲು.

ಭೇಟಿ ವೇಳೆ ಮೋದಿಯವರು ಮ್ಯಾನ್ಯಾರ್‍ ದೇಶದ ಸಂವಾದಕಿ (ಮ್ಯಾನ್ಯಾರ್’ನಲ್ಲಿ ಪ್ರಧಾನಮಂತ್ರಿ ಹುದ್ದೆಗೆ ಸಮ) ಆನ್‍ ಸಾನ್‍ ಸೂ ಕಿ ಅವರ ಜೊತೆ ಮತ್ತು ಅಧ್ಯಕ್ಷ ಯು ಹಿನ್ ಕ್ವಾ ಅವರ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಮ್ಯಾನ್ಯಾರ್’ನ ನೂತನ ರಾಜಧಾನಿ ನೈ ಪಿ ತಾವ್ ಮಾತ್ರವಲ್ಲದೆ ಪೂರ್ವರಾಜಧಾನಿ ಯಾಂಗೂನ್‍(ರಂಗೂನ್) ಮತ್ತು ಬಗಾನ್‍ ನಗರಗಳಿಗೂ ಮೋದಿ ಭೇಟಿ ನೀಡಲಿದ್ದಾರೆ.

ಮ್ಯಾನ್ಮಾರ್’ನಲ್ಲಿ ಮಿಲಿಟರಿ ಆಡಳಿತ ಕೊನೆಗೊಂಡು ಪ್ರಜಾಪ್ರಭುತ್ವವಾದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭಾರತದ ಪ್ರಧಾನಿಯೊಬ್ಬರು ಅಧಿಕೃತ ಭೇಟಿ ನೀಡುತ್ತಿರುವುದು ಪ್ರಾಮುಖ್ಯತೆ ಪಡೆದುಕೊಂಡಿದೆ.

-ಎನ್.ಬಿ.

Leave a Reply

comments

Related Articles

error: