ದೇಶಪ್ರಮುಖ ಸುದ್ದಿ

ಕ್ರೀಡಾಪಟುಗಳ ಹುಡುಕಾಟಕ್ಕಾಗಿ ವೆಬ್ ಪೋರ್ಟಲ್ ಗೆ ಚಾಲನೆ

ನವದೆಹಲಿ,ಆ.29: ರಾಷ್ಟ್ರೀಯ ಕ್ರೀಡಾ ಪ್ರತಿಭೆಗಳನ್ನು ಹುಡುಕುವ ಸಲುವಾಗಿ ಭಾರತದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು  ಪೋರ್ಟಲ್ ಒಂದಕ್ಕೆ ಇಂದು ಚಾಲನೆ ನೀಡಿದ್ದಾರೆ.

ದೇಶದ ಮೂಲೆ ಮೂಲೆಗಳಿಂದ ಕ್ರೀಡಾ ಪ್ರತಿಭೆಯನ್ನು ಹುಟ್ಟುಹಾಕಲು ಸರಕಾರ ಆರಂಭಿಸಿದೆ. ಒಂದು ಮಗು ಅಥವಾ ಅದರ ಪೋಷಕರು, ಶಿಕ್ಷಕರು ಅಥವಾ ತರಬೇತುದಾರರು ತಮ್ಮ ಕ್ರೀಡಾ ಸಾಧನೆಗಳನ್ನು ಅಥವಾ ವೀಡಿಯೊವನ್ನು ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡಬಹುದು. ಕೇಂದ್ರ ಕ್ರೀಡಾ ಸಚಿವಾಲಯವು ಪ್ರತಿಭಾನ್ವಿತ ಆಟಗಾರರನ್ನು ಆಯ್ಕೆ ಮಾಡಿ ಸ್ಪೋರ್ಟ್ಸ್ ಅಕಾಡೆಮಿ ಇಂಡಿಯಾ ಕೇಂದ್ರಗಳಲ್ಲಿ ತರಬೇತಿ ನೀಡಲಿದೆ ಎಂದರು. ಮೂಲಭೂತ ಸೌಕರ್ಯ ಮತ್ತು ತರಬೇತಿ ಸೌಲಭ್ಯಗಳನ್ನು ಹೊಂದಿರುವ ಅಕಾಡೆಮಿಗಳನ್ನು ಸ್ಥಾಪಿಸುವುದರಿಂದ ಭಾರತ ಪ್ರಬಲ ಕ್ರೀಡಾ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ಹೇಳಿದರು.

ಕ್ರಿಕೆಟ್ ಮತ್ತು ಹಾಕಿ ತಂಡದ ಕ್ರೀಡಾಕೂಟ ಹೊರತುಪಡಿಸಿ, ಕ್ರೀಡಾ ಸ್ಪರ್ಧೆಗಳಲ್ಲಿ ನಮ್ಮ ಯಶಸ್ಸು ವಿರಳ. ಸಾನಿಯಾ ಮಿರ್ಜಾ, ಪಿ.ವಿ ಸಿಂಧು, ಸೈನಾ ನೆಹವಾಲ್, ಪಿಟಿ ಉಷಾ, ಮಿಲ್ಖಾ ಸಿಂಗ್ ಅಥವಾ ಅಭಿನವ್ ಭೀಂದ್ರ ಅವರು ಎಲ್ಲರೂ ತಾವು ಮತ್ತು ಪರಿಶ್ರಮ ಮತ್ತು ಸತತ ಅಭ್ಯಾಸದಿಂದ ರಾಷ್ಟ್ರವು ಹೆಮ್ಮೆ ಪಡುವಂತೆ ಮಾಡಿದ್ದಾರೆ. ಆದರೆ ಯಾವ ರಾಜ್ಯ ಸರ್ಕಾರಗಳೂ ಇನ್ನಷ್ಟು ಇಂತಹ ಪ್ರತಿಭೆಗಳನ್ನು ಹುಟ್ಟುಹಾಕಬಲ್ಲ ಯಾವ ಕಾರ್ಯಕ್ರಮವನ್ನೂ ರೂಪಿಸುತ್ತಿಲ್ಲ ಎಂದರು. ರಾಷ್ಟ್ರೀಯ ಕ್ರೀಡಾ ಪ್ರತಿಭೆ ಸರ್ಚ್ ಪೋರ್ಟಲ್ ನ ವೇದಿಕೆಯು ಆಟಗಾರರಿಗೆ ವರವಾಗಲಿದೆ ಎಂದರು. (ವರದಿ: ಎಲ್.ಜಿ)

 

 

Leave a Reply

comments

Related Articles

error: