ಮೈಸೂರು

ಹಂಚ್ಯಾ ಗ್ರಾಮದಲ್ಲಿ ನೂತನ ಪೋಸ್ಟ್ ಆಫೀಸ್ ಶಾಖೆ ಉದ್ಘಾಟನೆ

ಮೈಸೂರು, ಆ.೨೯: ತಾಲೂಕಿನ ಹಂಚ್ಯಾ ಗ್ರಾಮದಲ್ಲಿ ಪೋಸ್ಟ್ ಆಫೀಸ್‌ನ ನೂತನ ಶಾಖೆಯನ್ನು ಸಂಸದ ಪ್ರತಾಪ್ ಸಿಂಹ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಕೇಂದ್ರ ಸರ್ಕಾರದ ನಿಯಮದನ್ವಯ ಪ್ರತಿ ಗ್ರಾಮ ಪಂಚಾಯತಿಗೊಂದು ಪೋಸ್ಟ್ ಆಫೀಸ್ ಘೋಷಣೆ ಮಾಡಿರುವ ಹಿನ್ನಲೆಯಲ್ಲಿ ಹಂಚ್ಯಾ ಗ್ರಾಮದಲ್ಲಿ ನೂತನ ಪೋಸ್ಟ್ ಆಫೀಸ್ ಶಾಖೆಯನ್ನು ಉದ್ಘಾಟಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕ ಜಿ.ಟಿ.ದೇವೇಗೌಡ, ಜಿ.ಪಂ ಸದಸ್ಯ ಮಾದೇಗೌಡ, ತಾ.ಪಂ ಸದಸ್ಯೆ ಪುಟ್ಟ ತಾಯಮ್ಮ, ಗ್ರಾಪಂ. ಅಧ್ಯಕ್ಷ ಕುಮಾರಸ್ವಾಮಿ, ಉಪಾಧ್ಯಕ್ಷೆ ಗಂಗವ್ವ ಸಿಗ್ಲಿ, ಸದಸ್ಯರಾದ ಮಂಜು, ಬಸವರಾಜು, ಪದ್ಮಮ್ಮ ಚಿಕ್ಕಮರಿನಾಯಕ, ವೀಣಾ ಮಹದೇವು, ಪುಟ್ಟಮ್ಮ ಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು. (ವರದಿ ಬಿ.ಎಂ)

 

Leave a Reply

comments

Related Articles

error: