ಕರ್ನಾಟಕ

ತಾಂತ್ರಿಕತೆಗಳ ಪ್ರಾಯೋಗಿಕ ಜ್ಞಾನ ಬಳಸಿ ಭವಿಷ್ಯದಲ್ಲಿ ಉನ್ನತ ಉದ್ಯೋಗದ ಜೊತೆ ಉತ್ಕೃಷ್ಟ ಜೀವನ ನಡೆಸಬಹುದು ; ಹೆಚ್.ಎಸ್. ಚೇತನ್‍ಮೂರ್ತಿ

ರಾಜ್ಯ(ತುಮಕೂರು)ಆ.29:-  ತಾಂತ್ರಿಕ ಶಿಕ್ಷಣ ಪಡೆಯುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಗಳು, ಪ್ರಸಕ್ತವಾಗಿ ಬಹುಬೇಡಿಕೆಯುಳ್ಳ ತಾಂತ್ರಿಕತೆಗಳ ಪ್ರಾಯೋಗಿಕ ಜ್ಞಾನವನ್ನು ತಮ್ಮದಾಗಿಸಿಕೊಂಡು, ಭವಿಷ್ಯದಲ್ಲಿ ಉನ್ನತ ಉದ್ಯೋಗದೊಂದಿಗೆ ಉತ್ಕೃಷ್ಟ ಜೀವನ ರೂಪಿಸಿಕೊಳ್ಳಬಹುದು ಎಂದು ಎಂ.ಇ.ಸಿ. ಟೆಕ್ನಿಕಲ್ ಸಲ್ಯೂಷನ್ಸ್‌‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಎಸ್. ಚೇತನ್‍ಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಶ್ರೀದೇವಿ ಪಾಲಿಟೆಕ್ನಿಕ್‍ನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ವತಿಯಿಂದ “ಪಿ. ಸಿ. ಬಿ. ಡಿಸೈನ್ ಮತ್ತು ಫ್ಯಾಬ್ರಿಕೇಷನ್” ಕುರಿತಾದ ವಿದ್ಯಾರ್ಥಿಗಳ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ತಾಂತ್ರಿಕ ಜಗತ್ತು ಎಂದೇ ಬಿಂಬಿತವಾಗಿರುವ ಪ್ರಸ್ತುತ ಪ್ರಪಂಚದಲ್ಲಿ ದಿನ ನಿತ್ಯವೂ ವಿನೂತನ, ವಿಶಿಷ್ಟ ಹಾಗೂ ಆಕರ್ಷಣೀಯ ತಂತ್ರಜ್ಞಾನಗಳು ಆವಿಷ್ಕಾರಗೊಳ್ಳುತ್ತಿವೆ ಎಂದು ಅವರು ಹೇಳಿದರು. ಈ ಸಂದರ್ಭ ವಿಭಾಗದ ಮುಖ್ಯಸ್ಥ ಟಿ.ಎನ್. ನೇತ್ರಾವತಿ, ಕಮ್ಯುನಿಕೇಷನ್ ವಿಭಾಗದ ಪ್ರಾಧ್ಯಾಪಕ ಪ್ರೊ. ಅಜೀಜ್ ಅಹಮದ್ ಷರೀಫ್, ಉಪನ್ಯಾಸಕಿ ಸುಮಶ್ರೀ, ಬಿ. ಕಿರಣ್ ಕುಮಾರ್, ಕೆ.ಯು. ಹರ್ಷಿತಾ, ಟಿ.ಸಿ. ರೂಪಾ,  ಶಾಜಿಯಾ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: