ಕರ್ನಾಟಕಮೈಸೂರು

ಎನ್‍ಐಇ ಆಶ್ರಯದಲ್ಲಿ ಅಂತರಕಾಲೇಜು ಪುರುಷರ ಬಾಸ್ಕೆಟ್‍ಬಾಲ್ ಪಂದ್ಯಾವಳಿ

ಮೈಸೂರಿನ ದಿ ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಶ್ರಯದಲ್ಲಿ ತಾಂತ್ರಿಕ ವಿಶ್ವವಿದ್ಯಾನಿಲಯದ ಅಂತರಕಾಲೇಜು ಪುರುಷರ ಬಾಸ್ಕೆಟ್ ಬಾಲ್, ಮೈಸೂರು ವಲಯ ಪಂದ್ಯಾವಳಿ 2016-17 ಅನ್ನು ಸೆಪ್ಟೆಂಬರ್ 6ರಂದು ಎನ್ ಐಇ ವಜ್ರಮಹೋತ್ಸವ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ 10 ಗಂಟೆಗೆ ಎನ್‍ಐಇಯ ಹಿರಿಯ ವಿದ್ಯಾರ್ಥಿ, ಅಂತಾರಾಷ್ಟ್ರೀಯ ಖ್ಯಾತ ಬಾಸ್ಕೆಟ್ ಬಾಲ್ ಆಟಗಾರ ರಾಜಗೋಪಾಲ ಕಡಾಂಬಿ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಎನ್‍ಐಇ ಆಡಳಿತ ಮಂಡಳಿ ಕಾರ್ಯದರ್ಶಿ ಎಸ್.ಕೆ. ಲಕ್ಷ್ಮಿನಾರಾಯಣ ಪಾಲ್ಗುಳ್ಳುತ್ತಾರೆ. ಪ್ರಾಂಶುಪಾಲ ಡಾ. ಜಿ.ಎಲ್. ಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ. ಪಂದ್ಯಾವಳಿಯಲ್ಲಿ ಮೈಸೂರು, ಕೊಡಗು, ಚಾಮರಾಜನಗರ, ಮಂಡ್ಯ ಹಾಗೂ ರಾಮನಗರ ಜಿಲ್ಲೆಗಳಲ್ಲಿರುವ ಎಲ್ಲಾ ಇಂಜಿನಿಯರಿಂಗ್ ಕಾಲೇಜುಗಳ ತಂಡಗಳು ಭಾಗವಹಿಸಲಿವೆ ಕಳೆದ ವರ್ಷದ ವಿಜೇತರಾದ ಎಸ್‍ಜೆಸಿಇ ಮೈಸೂರು, ಉಪವಿಜೇತರಾದ ಅತಿಥೇಯ ಎನ್‍ಐಇ ಮೈಸೂರು ಹಾಗೂ ಉಪಾಂತ್ಯ ತಲುಪಿದ್ದ ಪಿಇಎಸ್‍ಸಿಇ ಮಂಡ್ಯ, ಎಟಿಎಂಇಸಿಇ  ಮೈಸೂರು ತಂಡಗಳು ವಿಶೇಷ  ವರ್ಗೀಕೃತ ಪಟ್ಟಿಯಲ್ಲಿ ಕ್ರಮವಾಗಿ 1, 2, 3 ಮತ್ತು  4ನೇ ಸ್ಥಾನ ಪಡೆದಿವೆ. ಇದೇ ಮೊದಲ ಬಾರಿಗೆ ನಗರದಲ್ಲಿ ಅಂತರಕಾಲೇಜು ಪುರುಷರ ಬಾಸ್ಕೆಟ್ ಬಾಲ್ ಪಂದ್ಯಾವಳಿ ಒಳಾಂಗಣ ಕ್ರೀಡೆಯಾಗಿ ನಡೆಯುತ್ತಿರುವುದು ವಿಶೇಷ. ಹೆಚ್ಚಿನ ಮಾಹಿತಿಗಾಗಿ ದೈಹಿಕ ಶಿಕ್ಷಣ ನಿರ್ದೇಶಕರಾದ ಎಚ್. ಎನ್. ಶಂಕರ ನಾರಾಯಣ ಅವರನ್ನು ಮೊಬೈಲ್ ದೂರವಾಣಿ ಸಂಖ್ಯೆ 9945901096/ 8792056770 ಮೂಲಕ ಸಂಪರ್ಕಿಸಬಹುದು.

Leave a Reply

comments

Related Articles

error: