ಸುದ್ದಿ ಸಂಕ್ಷಿಪ್ತ

ಅ.25: ವಿಕಲಾಂಗ ಚೇತನರಿಗೆ ಸೌಲಭ್ಯ ವಿತರಣೆ

ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಮಮತ್ರಾಲಯ ಅಲಿಮ್ಕೋ, ಬೆಂಗಳೂರು – ಇವರು ಮೈಸೂರು ಜಿಲ್ಲೆಯ ವಿಕಲಾಂಗಚೇತನರನ್ನು ತಾಲೂಕುವಾರು 2014ರ ಜನವರಿ ಮಾಹೆಯಲ್ಲಿ ವೈದ್ಯಕೀಯ ತಪಾಸಣೆಗಳ ಮೂಲಕ ದೈಹಿಕ ವಿಕಲತೆಯುಳ್ಳ ವ್ಯಕ್ತಿಗಳಿಗೆ ಕೈಚಾಲಿತ ಸಾದಾ ತ್ರಿಚಕ್ರವಾಹನಗಳ, ಗಾಲಿಕುರ್ಚಿ, ಊರುಗೋಲು, ನಡಿಗೆಕೋಲು, ಕ್ಯಾಲಿಪರ್ಸ್, ಬ್ರೇಸಸ್, ಕೃತಕ ಕೈ ಮತ್ತು ಕೃತಕ ಕಾಲು ಜೋಡಣೆ, ಶ್ರವಣದೋಷವುಳ್ಳವ್ಯಕ್ತಿಗಳಿಗೆ ಶ್ರವಣದೋಷವುಳ್ಳ ವ್ಯಕ್ತಿಗಳಿಗೆ ಶ್ರವಣೋಪಕರಣಗಳು, ದೃಷ್ಟಿದೋಷವುಳ್ಳ ವ್ಯಕ್ತಿಗಳಿಗೆ ವೈಟ್‍ಕೇನ್, ಬ್ರೈಲ್ ಕಿಟ್, ದೃಷ್ಟಿದೋಷವುಳ್ಳ ವಿದ್ಯಾರ್ಥಿಗಳಿಗೆ ಬ್ರೈಲ್ ಸ್ಲೇಟ್‍ ಗಳನ್ನು, ಬುದ್ಧಿಮಾಂದ್ಯ ವ್ಯಕ್ತಿಗಳಿಗೆ ಎ.ಡಿ.ಎಲ್. ತರಬೇತಿಗೆ ಎಂ.ಆರ್. ಕಿಟ್‍ಗಳನ್ನು ಅರ್ಹ 1300 ವಿಕಲಾಂಗ ಚೇತನರಿಗೆ ವಿತರಿಸಲು ಗುರುತಿಸಲಾದವರಿಗೆ ಸಾಧನ ಸಲಕರಣೆಗಳ ವಿತರಣೆ ಕಾರ್ಯಕ್ರಮವನ್ನು ಅ.25ರಂದು ಮೈಸೂರಿನ ಹುಣಸೂರು ರಸ್ತೆಯಲ್ಲಿರುವ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ. ಅರ್ಹರೆಂದು ಗುರುತಿಸಲ್ಪಟ್ಟಿರುವವರು ಹಾಜರಾಗಿ ಸಾಧನಗಳನ್ನು ಪಡೆದುಕೊಳ್ಳಬಹುದು ಎಂದು ಮೈಸೂರು ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.

Leave a Reply

comments

Related Articles

error: