ಕರ್ನಾಟಕ

ಬರೀ ಕೈಗಳಿಂದ ಶೌಚಾಲಯ ಗುಂಡಿ ಸ್ವಚ್ಛಗೊಳಿಸಿ ಮಾನವೀಯತೆ ಮರೆತ ವ್ಯಕ್ತಿ

ರಾಜ್ಯ(ತುಮಕೂರು)ಆ.29:- ಗುಬ್ಬಿ ತಾಲೂಕಿನ ಕಡಬ ಹೋಬಳಿಯ ಕಲ್ಲೂರು ಗ್ರಾಮದಲ್ಲಿ ದಲಿತ ವ್ಯಕ್ತಿಯೊಬ್ಬರಿಂದ ಶೌಚಾಲಯದ ಗುಂಡಿಯನ್ನು ಬರೀ ಕೈಗಳಿಂದ ಸ್ವಚ್ಛ ಮಾಡಿಸಿರುವ ಅಮಾನವೀಯ ಘಟನೆ ನಡೆದಿದೆ.
ತಾಲೂಕಿನ ಕಲ್ಲೂರು ಗ್ರಾಮದ ಬಳಿ ರಂಗನಾಥ್ ಎಂಬುವರು ತಮ್ಮ ಮನೆಯ ಶೌಚಾಲಯದ ಗುಂಡಿಯನ್ನು ಸ್ವಚ್ಛ ಮಾಡಿಸಿರುವ ವ್ಯಕ್ತಿ. ಇಂತಹ ಅಮಾನವೀಯ ಕೃತ್ಯ ಮಾಡಿಸಿರುವ ಬಳೆ ರಂಗನಾಥ್ ಎಂಬಾತನ ಕೃತ್ಯ ಜಾಲತಾಣಗಳ ಮೂಲಕ ಬಯಲಾಗಿದೆ.
ನಾಗರೀಕ ಸಮಾಜ ತಲೆ ತಗ್ಗಿಸುವ ಕೆಲಸ ಮಾಡಿರುವ ರಂಗನಾಥನ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ವಿವಿಧ ದಲಿತ ಪರ ಸಂಘಟನೆಗಳು ಆಗ್ರಹಿಸಿವೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: