ಮೈಸೂರು

ಗಾನಭಾರತಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ

ಮೈಸೂರಿನ ಕುವೆಂಪುನಗರದ ಗಾನಭಾರತೀ ವೀಣೆ ಶೇಷಣ್ಣ ಭವನದ ರಜತಮಹೋತ್ಸವದ ಅಂಗವಾಗಿ ಅಕ್ಟೋಬರ್ 24ರಿಂದ 26ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸೋಮವಾರ ಪ್ರಥಮ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ವಿದ್ವಾನ್ ಅನಂತ ಪದ್ಮನಾಭನ್ ನಡೆಸಿಕೊಟ್ಟ ವೀಣಾವಾದನ ಸಂಗೀತಪ್ರಿಯರ ಮನಸ್ಸನ್ನು ಸೂರೆಗೊಂಡಿತು. ಮೃದಂಗದಲ್ಲಿ ತುಮಕೂರು ಬಿ.ರವಿಶಂಕರ್, ಘಟಂನಲ್ಲಿ ಎಸ್.ಮಂಜುನಾಥ್ ಸಾಥ್ ನೀಡಿದರು. ಅಕ್ಟೋಬರ್ 25ರಂದು ವೀಣೆ ಶೇಷಣ್ಣನವರ ಕೃತಿಗಳನ್ನಾಧರಿಸಿದ ಪಂಚವೀಣಾ ಕಾರ್ಯಕ್ರಮ ನಡೆಯಲಿದ್ದು, ವಿದುಷಿ ಎಂ.ಕೆ.ಸರಸ್ವತಿ, ಮೈಸೂರು ಎಸ್.ರಾಜಲಕ್ಷ್ಮೀ, ಎಸ್.ವಿ.ಸಹನಾ, ಡಾ.ಎಸ್.ವಿಜಯರಾಘವನ್, ಆರ್.ಕೆ.ರಾಘವನ್ ಅವರ ವೀಣಾವಾದನಕ್ಕೆ, ಪಕ್ಕವಾದ್ಯದಲ್ಲಿ ಎ.ರೇಣುಕಾಪ್ರಸಾದ್, ಸುಕನ್ಯಾ ರಾಂಗೋಪಾಲ್ ಸಾಥ್ ನೀಡಲಿದ್ದಾರೆ

Leave a Reply

comments

Related Articles

error: