ಪ್ರಮುಖ ಸುದ್ದಿವಿದೇಶ

ವಿಶಾಲ್ ಸಿಕ್ಕಾ ಪತ್ನಿ ವಂದನಾ ಸಿಕ್ಕಾ ಇನ್ಫೋಸಿಸ್ ಫೌಂಡೇಶನ್ ಯುಎಸ್ಎ ಗೆ ರಾಜೀನಾಮೆ

ಅಮೇರಿಕಾ, ಆ.29: ಇನ್ಫೋಸಿಸ್ ಸಿಇಒ ಹುದ್ದೆಗೆ ವಿಶಾಲ್ ಸಿಕ್ಕಾ ರಾಜೀನಾಮೆ ನೀಡಿದ ಬೆನ್ನಲ್ಲೇ ಸಿಕ್ಕಾ ಪತ್ನಿ ವಂದನಾ ಇನ್ಫೋಸಿಸ್ ಫೌಂಡೇಷನ್ ನಿಂದ ಹೊರಬಂದಿದ್ದಾರೆ.

ಅಮೆರಿಕದಲ್ಲಿರುವ ಇನ್ಫೋಸಿಸ್ ನ ಸಾಮಾಜಿಕ ವಿಭಾಗದ ಅಧ್ಯಕ್ಷೆಯಾಗಿದ್ದ ವಂದನಾ ಸಿಕ್ಕಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ಇನ್ಫೋಸಿಸ್ ಫೌಂಡೇಷನ್ ಯುಎಸ್‌ಎ ಗೆ ರಾಜೀನಾಮೆ ನೀಡುತ್ತಿರುವುದಾಗಿ ವಂದನಾ ಹೇಳಿದ್ದಾರೆ. ವಂದನಾ ಸಿಕ್ಕಾ ರಾಜೀನಾಮೆ ಪತ್ರವನ್ನು ಬ್ಲಾಗ್ ನಲ್ಲಿಯೂ ಹಂಚಿಕೆ ಮಾಡಿಕೊಂಡಿದ್ದಾರೆ. ಕಳೆದ ಎರಡೂವರೆ ವರ್ಷಗಳಿಂದ ವಂದನಾ ಸಿಕ್ಕಾ ಯುಎಸ್ಎ ಇನ್ಫೋಸಿಸ್ ಫೌಂಡೇಷನ್ ನ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಮಾಸ್ಟರ್ ಡಿಗ್ರಿ ಪಡೆದಿದ್ದು, ಇನ್ಫೋಸಿಸ್ ಸೇರುವುದಕ್ಕೂ ಮುನ್ನ ಸ್ಟಾಟ್ ಅಪ್ ನ್ನು ಪ್ರಾರಂಭಿಸಲು ಮುಂದಾಗಿದ್ದರು. (ವರದಿ: ಎಲ್.ಜಿ)

Leave a Reply

comments

Related Articles

error: