
ಪ್ರಮುಖ ಸುದ್ದಿಮೈಸೂರು
ಬಾಬಾ ರಾಂ ರಹೀಂ ಪ್ರಕರಣದಲ್ಲಿ ಸತ್ಯ ಆಚೆಗೆ ತಂದ ಪ್ರಾಮಾಣಿಕ ಸಿಬಿಐ ಅಧಿಕಾರಿಯಿಂದ ಸ್ಫೋಟಕ ಮಾಹಿತಿ
ಮೈಸೂರು,ಆ.29:- ಬಾಬಾ ರಾಂ ರಹೀಂ ಪ್ರಕರಣದಲ್ಲಿ ಸತ್ಯ ಆಚೆಗೆ ತಂದ ಪ್ರಾಮಾಣಿಕ ಸಿಬಿಐ ಅಧಿಕಾರಿಯೋರ್ವರು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಡೇರಾ ಸಚ್ಚಾ ಸೌಧದ ಕರ್ಮಕಾಂಡವನ್ನು ಎಳೆಎಳೆಯಾಗಿ ನಿವೃತ್ತ ಸಿಬಿಐ ಡಿಐಜಿ ನಾರಾಯಣ್ ಬಿಚ್ಚಿಟ್ಟಿದ್ದು, ಬಾಬಾ ಸ್ವಾಮೀಜಿ ಕರ್ಮಕಾಂಡ ಒಂದೆರಡಲ್ಲ. ತನಿಖೆ ಮಾಡಲು ನಮಗೆ ಭಾರೀ ಒತ್ತಡವಿತ್ತು, ಬಾಬಾ ಅನುಯಾಯಿಗಳ ಬೆದರಿಕೆಗಳಂತೂ ಹೆಚ್ಚಾಗಿತ್ತು. ಹಲವಾರು ಹೆಣ್ಣು ಮಕ್ಕಳು ಬಾಬಾ ಸ್ವಾಮೀಜಿ ದೌರ್ಜನ್ಯಕ್ಕೆ ತುತ್ತಾಗಿದ್ದರೂ ನಮ್ಮ ತನಿಖೆಗೆ ಸಹಕರಿಸಿದವರು ಇಬ್ಬರು ಹೆಣ್ಣುಮಕ್ಕಳು ಮಾತ್ರ. ಅವರು ನೀಡಿದ ಸಾಕ್ಷ್ಯದಿಂದಾಗಿ ಇಡೀ ಪ್ರಕರಣಕ್ಕೆ ಜೀವ ಬಂತು ಎಂದಿದ್ದಾರೆ. ಸಿಬಿಐಗೆ ದೂರಾಗಿದ್ದರೂ ಐದು ವರ್ಷ ಕಾಲ ರಾಜಕೀಯ ಒತ್ತಡದಿಂದಾಗಿ ಪ್ರಕರಣದ ತನಿಖೆಯಾಗಿರಲಿಲ್ಲ. ಹೈಕೋರ್ಟ್ ನಮಗೆ ಒಪ್ಪಿಸಿದ ಪ್ರಕರಣವನ್ನು ತನಿಖೆ ಮಾಡಿದೆವು. ಕೋರ್ಟ್ ತೀರ್ಪು ನನಗೆ ಸಮಾಧಾನ ತರುವುದು ಮುಖ್ಯವಲ್ಲ, ನೊಂದ ಮಹಿಳೆಯರಿಗೆ ನ್ಯಾಯ ಸಿಗಬೇಕಿತ್ತು.ಈ ಪ್ರಕರಣದಿಂದ ಅಧಿಕಾರಿಗಳು ಪಾಠ ಕಲಿಯಬೇಕು. ಎಷ್ಟೇ ಒತ್ತಡವಿರಲಿ ನಮಗೆ ಒಪ್ಪಿಸಿದ ಕಾರ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು.ಸಾವು ನಮ್ಮ ಕೈಲಿ ಇರೋದಿಲ್ಲ. ಯಾಕೆಂದರೆ ಅನೇಕ ದಾಳಿಯಿಂದ ಬಚಾವಾಗಿದ್ದೇನೆ.ನನಗೆ ಯಾವುದೇ ಭಯವಿಲ್ಲ, ಯಾವುದೇ ಬೆದರಿಕೆಗೆ ಬಗ್ಗದೆ ತನಿಖೆ ಮಾಡಿದ್ದೇನೆ ಇದೊಂದೇ ಪ್ರಕರಣವಲ್ಲ, ರಾಜೀವ್ ಗಾಂಧಿ ಹತ್ಯೆ, ಬಾಬ್ರಿ ಮಸೀದಿ ಪ್ರಕರಣದ ತನಿಖೆಯಲ್ಲೂ ಭಾಗಿಯಾಗಿದ್ದೆ. ನಮ್ಮ ದೇಶದಲ್ಲಿ ಇಂತಹ ಬಾಬಾಗಳಿಗೆ ರಾಜಕೀಯ ಪಕ್ಷಗಳ ಬೆಂಬಲವಿದೆ, ಹಾಗಾಗಿ ತನಿಖೆ ಮಾಡೋದು ಕಷ್ಟವಾಯಿತು ಎಂದಿದ್ದಾರೆ. (ಆರ್.ವಿ,ಎಸ್.ಎಚ್)