ಮೈಸೂರು

ಇಎಸ್‍ಐ ಹಣ ವಂಚನೆ: ಬಿಎಸ್‍ಎನ್‍ಎಲ್‍ ಕಂಟ್ರಾಕ್ಟ್ ಕಾರ್ಮಿಕರಿಂದ ಪ್ರತಿಭಟನೆ

ಗುತ್ತಿಗೆ ಕಾರ್ಮಿಕರ ವೇತನದಿಂದ ಕಡಿತಗೊಳಿಸುತ್ತಿರುವ ಇಎಸ್‍ಐ ಹಣವನ್ನು ನೀಡದೆ ವಂಚನೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಬಿಎಸ್‍ಎನ್‍ಎಲ್ ಕಂಟ್ರಾಕ್ಟ್ ಕಾರ್ಮಿಕರ ಸಂಘದಿಂದ ಸೋಮವಾರ ಪ್ರತಿಭಟನೆ ನಡೆಯಿತು.

ಬೆಂಗಳೂರು-ಮೈಸೂರು ರಸ್ತೆಯ ಸುಭಾಷ್‍ನಗರದ ಇಎಸ್‍ಐ ಪ್ರಾದೇಶಿಕ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಗುತ್ತಿಗೆದಾರನ ವಿರುದ್ಧ ಘೋಷಣೆಗಳನ್ನು ಕೂಗಿದರು. ಗುತ್ತಿಗೆದಾರ ಕಂಪನಿಯ ವಂಚನೆಯಿಂದಾಗಿ ನಮಗೆ ಯಾವುದೇ ಆಸ್ಪತ್ರೆಯಲ್ಲಿ ಇಎಸ್‍ಐ ಅಡಿಯಲ್ಲಿ ಚಿಕಿತ್ಸೆ ದೊರೆಯುತ್ತಿಲ್ಲ. ನಮಗೆ ನ್ಯಾಯುತವಾಗಿ ದೊರೆಯಬೇಕಾದ ಸೌಲಭ್ಯ ಸಿಗುತ್ತಿಲ್ಲ. ಸಂಸ್ಥೆಯ ವಿರುದ್ಧ ಕ್ರಮ ಕೈಗೊಂಡು ಸಂದಾಯವಾಗಬೇಕಿದ್ದ ಮೊತ್ತವನ್ನು ವಸೂಲಿ ಮಾಡಬೇಕೆಂದು ಒತ್ತಾಯಿಸಿದರು.

ಸುಮಾರು ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದೇವೆ. ರಂಗನಾಥ್ ಎಂಟರ್‍ಪ್ರೈಸಸ್ ಸಂಸ್ಥೆ ನಮ್ಮನ್ನು ನೇಮಿಸಿಕೊಂಡಿದೆ. ನಮ್ಮ ಸಂಬಳದಲ್ಲಿ ಇಎಸ್‍ಐ ಸೌಲಭ್ಯಕ್ಕಾಗಿ ಹಣ ಕಡಿತ ಮಾಡಿಕೊಳ್ಳುತ್ತಿರುವ ಸಂಸ್ಥೆ ಅದನ್ನು ಸರಕಾರಕ್ಕೆ ಕಟ್ಟುತ್ತಿಲ್ಲ ಎಂದು ಆರೋಪಿಸಿದರು.

Leave a Reply

comments

Related Articles

error: