ಮೈಸೂರು

ಭವಿಷ್ಯದ ದೃಷ್ಟಿಯಿಂದ ಶ್ರದ್ಧೆಯಿಂದ ಅಭ್ಯಾಸಿಸಿ : ಡಾ.ಬಿ.ಮಂಜುನಾಥ್ ಕರೆ

ಮೈಸೂರು,ಆ.29 : ಜಗದ್ಗುರು ಶ್ರೀ ಶಿವರಾತ್ರೀಶ್ವರ ವಿಶ್ವವಿದ್ಯಾಲಯದ ಜೀವ ವಿಜ್ಞಾನದ ಜಲ ಮತ್ತು ಆರೋಗ್ಯ ವಿಭಾಗದ 2017-18ನೇ ಸಾಲಿನ ಬಿಎಸ್ಸಿ ಮತ್ತು ಎಂಎಸ್ಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ನಡೆಯಿತು.

ಜೆ.ಎಸ್.ಎಸ್ ವಿವಿಯ ಕುಲಸಚಿವ ಡಾ.ಬಿ.ಮಂಜುನಾಥ್ ಉದ್ಘಾಟಿಸಿ ಮಾತನಾಡಿದ ಅವರು ಭವಿಷ್ಯದ ದೃಷ್ಟಿಯಿಂದ ಶ್ರಮ ವಹಿಸಿ ಮತ್ತು ಶ್ರದ್ಧೆಯಿಂದ ಅಭ್ಯಾಸ ನಡೆಸಬೇಕೆಂದು ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ತುಂಬಿದರು.

ಈ ಸಂದರ್ಭದಲ್ಲಿ ಕುಲಪತಿ ಡಾ.ಬಿ.ಸುರೇಶ್, ನಿರ್ದೇಶಕ ಡಾ.ಕುಶಾಲಪ್ಪ, ಡಾ.ಎಸ್.ಬಾಲಸುಬ್ರಹ್ಮಣ್ಯನ್, ಪ್ರೊ.ಜಿ.ಕೆ.ಚಂದ್ರಶೇಖರಪ್ಪ, ಡಾ.ಬಿ.ಎಂ. ಕಾಂತೇಶ್, ಡಾ.ಕೆ.ಸಿ. ಲತಾ, ಪ್ರೊ.ಪಿ.ಅಶ್ವಿನಿ, ಡಾ.ದತ್ತಾತ್ರಿ ನಾಗೇಶ್, ಡಾ.ಹೆಚ್. ಪಿ.ಶಿವರಾಜು ಮೊದಲಾದವರು ಭಾಗವಹಿಸಿದ್ದರು. (ಕೆ.ಎಂ.ಆರ್)

Leave a Reply

comments

Related Articles

error: