ಕರ್ನಾಟಕ

ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಗೆಲುವು

ಸೋಮವಾರಪೇಟೆ, ಆ.29: ಗೋಣಿಮರೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಮಸಗೋಡು ಚೆನ್ನಮ್ಮ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸೋಮವಾರಪೇಟೆ ಕ್ಲಸ್ಟರ್ ಮಟ್ಟದಲ್ಲಿ ಚೌಡ್ಲು ಸಾಂದೀಪನಿ ಆಂಗ್ಲ ಮಾಧ್ಯಮ ಶಾಲೆಗಳು ಸಮಗ್ರ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡು ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಇತ್ತೀಚೆಗೆ ಶಾಲೆಯಲ್ಲಿ ನಡೆದ ಗೋಣಿಮರೂರು ಕ್ಲಸ್ಟರ್ ವ್ಯಾಪ್ತಿಯ 22 ಶಾಲೆಗಳ ಪ್ರತಿಭಾ ಕಾರಂಜಿಯ ಎಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಮಸಗೋಡು ಚೆನ್ನಮ್ಮ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ತಮ್ಮ ತಮ್ಮ ಪ್ರತಿಭೆಗಳನ್ನು ಮೆರೆದು ಶಾಲೆಗೆ ಚಾಂಪಿಯನ್ ಶಿಪ್ ಪಡೆದಿದ್ದರೆ, ಶಾಲೆಯ 5ನೇ ತರಗತಿ ವಿದ್ಯಾರ್ಥಿ ಸುಜನ್ ಪ್ರತಿಭಾ ಕಾರಂಜಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾನೆ.

1ರಿಂದ 5ನೇ ತರಗತಿ ವಿಭಾಗದ ಕನ್ನಡ, ಇಂಗ್ಲೀಷ್ ಕಠಪಾಠ ಹಾಗೂ ಭಕ್ತಿಗೀತೆಯಲ್ಲಿ ಸೃಜನ್ ಪ್ರಥಮ, ಕಥೆ ಹೇಳುವ ಸ್ಪರ್ಧೆಯಲ್ಲಿ ಸ್ಪಂಧನ(ಪ್ರ), ಸಂಸ್ಕೃತ ಪಠಣದಲ್ಲಿ ಶ್ರೀನಿಧಿ, ಅರೇಬಿಕ್ ಪಠಣದಲ್ಲಿ ಅಫ್‍ಜಲ್(ಪ್ರ), ಲಘು ಸಂಗೀತದಲ್ಲಿ ಜಸ್ನಾ(ಪ್ರ), ಛಧ್ಮವೇಷ ಸ್ಪರ್ಧೆಯಲ್ಲಿ ಕನೀಶ್ ಕಾವೇರಪ್ಪ(ಪ್ರ), ದೇಶಭಕ್ತಿ ಗೀತೆಯಲ್ಲಿ ಚೈತನ್ಯ ಮತ್ತು ತಂಡ(ಪ್ರ), ಕವ್ವಾಲಿಯಲ್ಲಿ ಗೌತಮ್ ಮತ್ತು ತಂಡ(ಪ್ರ) ಸ್ಥಾನ ಗಳಿಸಿದರು.  6ರಿಂದ 8ನೇ ತರಗತಿ ವಿಭಾಗದ ಛದ್ಮವೇಷ ಸ್ಪರ್ಧೆಯಲ್ಲಿ ಗೌತಮ್(ದ್ವಿ), ಕೋಲಾಟದಲ್ಲಿ ಸಾನಿಕ ಮತ್ತು ತಂಡ(ತೃ), ಕನ್ನಡ ಮತ್ತು ಇಂಗ್ಲೀಷ್ ಕಂಠಪಾಠದಲ್ಲಿ ಪವನ್(ಪ್ರ), ಧಾರ್ಮಿಕ ಪಠಣದಲ್ಲಿ ಆದಿಲ್(ಪ್ರ), ಭಕ್ತಿಗೀತೆ ಹಾಗೂ ಲಘು ಸಂಗೀತ ಸ್ಪರ್ಧೆಯಲ್ಲಿ ತೇಜಸ್ವಿನಿ(ಪ್ರ), ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ ರಿತೇಶ್ ಮತ್ತು ತಂಡ(ಪ್ರ), ಚಿತ್ರಕಲೆಯಲ್ಲಿ ಚರಣ್(ದ್ವಿ), ಕವ್ವಾಲಿಯಲ್ಲಿ ಶ್ರೇಯಸ್ ಮತ್ತು ತಂಡ(ದ್ವಿ), ಇಂಗ್ಲೀಷ್ ಭಾಷಣದಲ್ಲಿ ವಿಕೇಶ್ ಶೆಟ್ಟಿ(ತೃ), ಗಝಲ್ ಹಾಗೂ ಹಿಂದಿ ಭಾಷಣದಲ್ಲಿ ಝಲ್ಫ್(ತೃ), ಜಾನಪದ ನೃತ್ಯದಲ್ಲಿ ಪುಣ್ಯ ಮತ್ತು ತಂಡ(ತೃ), ಕೋಲಾಟದಲ್ಲಿ ಮುಕ್ತ ಮತ್ತು ತಂಡ(ತೃ) ಹಾಗೂ ಧಾರ್ಮಿಕ ಪಠಣದಲ್ಲಿ ವಿಕಾಶ್ ಶೆಟ್ಟಿ(ತೃ) ಸ್ಥಾನ ಗಳಿಸಿದ್ದಾರೆ. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: