ಕರ್ನಾಟಕಪ್ರಮುಖ ಸುದ್ದಿ

ಮಲೆಮಹದೇಶ್ವರ ಬೆಟ್ಟದಲ್ಲಿ ನಂಗಾನಾಚ್ ಪ್ರಕರಣ : ಇಬ್ಬರು ಸಿಬ್ಬಂದಿಗಳ ಅಮಾನತು

ರಾಜ್ಯ(ಚಾಮರಾಜನಗರ)ಆ.30:-  ಕೊಳ್ಳೇಗಾಲ ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದ ನಂಗಾನಾಚ್  ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಸಿಬ್ಬಂದಿಗಳ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ಮಲೆಮಹದೇಶ್ವರ ಬೆಟ್ಟ ಪ್ರಾಧಿಕಾರದ ಎಸ್ ಡಿಎ ಹಾಗೂ ಪ್ರಾಧಿಕಾರ ನೌಕರರ ಸಂಘದ ಕಾರ್ಯದರ್ಶಿ ಪಿ.ಮಹದೇವಸ್ವಾಮಿ ಹಾಗೂ ಕಾರ್ಯಾರ್ಥ ನೌಕರ ಬಸವಣ್ಣ ಅವರನ್ನು ಪ್ರಾಧಿಕಾರದ ಕಾರ್ಯದರ್ಶಿ ಗಾಯಿತ್ರಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಗಣೇಶೋತ್ಸವ ಕಾರ್ಯಕ್ರಮದ ಅಂಗವಾಗಿ  ಪಿ.ಮಹದೇವಸ್ವಾಮಿ ಹಾಗೂ ಬಸವಣ್ಣ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ಯುವತಿಯೋರ್ವಳು ಅರೆಬೆತ್ತಲೆ ನೃತ್ಯ ಪ್ರದರ್ಶನ ನೀಡಿದ್ದಳು. ಮಾದಪ್ಪನ ಸನ್ನಿಧಾನದಲ್ಲಿ ಅರೆಬೆತ್ತಲೆ ನೃತ್ಯಕ್ಕೆ ಭಕ್ತರಿಂದ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರನ್ನು ಅಮಾನತುಗೊಳಿಸಲಾಗಿದೆ. (ಕೆ.ಎಸ್,ಎಸ್.ಎಚ್)

.

Leave a Reply

comments

Related Articles

error: