ಮೈಸೂರು

ಮನಪಾ ನಾಮನಿರ್ದೇಶಿತ ಸದಸ್ಯರ ಅಧಿಕಾರಾವಧಿ ವಿಸ್ತರಣೆ

ಮಂಗಳವಾರ ಮೈಸೂರು ಮಹಾನಗರಪಾಲಿಕೆಯ ಐವರು ನಾಮನಿರ್ದೇಶಿತ ಸದಸ್ಯರ ಅಧಿಕಾರಾವಧಿ ಅಂತ್ಯಗೊಳ್ಳಲಿದೆ. ಆದರೆ ಸರ್ಕಾರ ಅವರ ಅಧಿಕಾರಾವಧಿಯನ್ನು ವಿಸ್ತರಿಸಿ ಆದೇಶ ಹೊರಡಿಸಿದೆ.

ನಾಮನಿರ್ದೇಶಿತ ಸದಸ್ಯರಾಗಿದ್ದ ಹೆಬ್ಬಾಳದ ಹೆಚ್.ಕೆ.ಅನಂತ್, ಸಿದ್ದಾರ್ಥನಗರದ ಪಿ.ದೇವರಾಜು, ಎನ್.ಆರ್.ಮೊಹಲ್ಲಾದ ರಘುರಾಜೇ ಅರಸ್, ವಿದ್ಯಾರಣ್ಯಪುರಂ ಕನಕಗಿರಿಯ ಅಶೋಕ್ ಕುಮಾರ್, ಹೆಬ್ಬಾಳದ ಹೆಚ್.ಎಸ್.ಪ್ರಕಾಶ್ ನಾಮನಿರ್ದೇಶಿತ ಸದಸ್ಯರಾಗಿ ಮುಂದುವರಿಯಲಿದ್ದಾರೆ.

2015ರ ಜುಲೈ 25ರಂದು ಸರ್ಕಾರ ಇವರನ್ನು ಹದಿನೈದು ತಿಂಗಳ ಅವಧಿಗೆ ನಾಮನಿರ್ದೇಶಿತ ಸದಸ್ಯರಾಗಿ ನೇಮಕ ಮಾಡಿ ಆದೇಶ ಹೊರಡಿಸಿತ್ತು. ಅಕ್ಟೋಬರ್ 25ರಂದು ಅವರ ಹದಿನೈದು ತಿಂಗಳ ಅಧಿಕಾರಾವಧಿ ಮುಗಿದಿತ್ತು. ಆದರೆ ಸರ್ಕಾರ ಮತ್ತೆ ಅವರನ್ನೇ ಅಧಿಕಾರದಲ್ಲಿ ಮುಂದುವರಿಯುವಂತೆ ಆದೇಶ ಹೊರಡಿಸಿದೆ.

ನಿಗಮ ಮಂಡಳಿಗಳಿಗೆ ನೂತನ ಅಧ್ಯಕ್ಷರ ನೇಮಕಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ನೊಂದಿಗೆ ಈ ಕುರಿತ ಚರ್ಚೆ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ತಂಡ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

Leave a Reply

comments

Related Articles

error: