ಕರ್ನಾಟಕಪ್ರಮುಖ ಸುದ್ದಿಮೈಸೂರು

ನಮ್ಮ ಬಳಿಯೂ ಸಾಕಷ್ಟು ಅಸ್ತ್ರಗಳಿದ್ದು ಸಮಯ ಬಂದಾಗ ಬಳಕೆ ಮಾಡುತ್ತೇವೆ: ಡಿಕೆಶಿ

ಮೈಸೂರು,ಆ,30:- ಮೈಸೂರಿನಲ್ಲಿರುವ ತಾಯಿ ಚಾಮುಂಡೇಶ್ವರಿಯ ಕ್ಷೇತ್ರಕ್ಕೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ  ಅವರು ಪ್ರತಿ ಪ್ರಶ್ನೆಗೂ ಮರು ಪ್ರಶ್ನೆದಾಟಿಯಲ್ಲಿ ಉತ್ತರ ನೀಡಿದರು. ಐಟಿ ದಾಳಿ ಬಗ್ಗೆ ಮುಖ್ಯಮಂತ್ರಿಗಳ ಹೇಳಿಕೆ ಸಮಂಜಸವಾಗಿದೆ. ವಿಜಯ್ ಮುಳುಗುಂದ ರಾಜಕೀಯವಾಗಿ ಬೆಳೆಯುತ್ತಿದ್ದ. ಗುಜರಾತ್ ಶಾಸಕರು ರಾಜ್ಯಕ್ಕೆ ಬಂದಾಗ ಉಸ್ತುವಾರಿ ವಹಿಸಿದ್ದ. ಆತನ ಮನೆ ಮೇಲೆ ದಾಳಿ ಮಾಡಿದ್ದನ್ನು ಮಾಧ್ಯಮದಿಂದ ತಿಳಿದಿದ್ದೇನೆ. ದುಖಃ ದೂರ ಮಾಡುವ ದೇವಿ ದರ್ಶನ ಪಡೆಯಲು ಬಂದಿದ್ದೇನೆ . ದುಖಃ ಎಂದ್ರೆ ಕೇವಲ ನನಗಷ್ಟೇ ಅಲ್ಲ. 73 ಜನರಿಗೆ ಹಗಲು ರಾತ್ರಿ ಕಷ್ಟ ಕೊಟ್ಟಿದ್ದಾರೆ.  ಎಲ್ಲಾ ಕಡೆಯಿಂದ ನೀಡುತ್ತಿರುವ ಒತ್ತಡ ಕಿರುಕುಳ ನಿವಾರಿಸಿಕೊಳ್ಳಲು ಬಂದಿದ್ದೇನೆ. ಮಾಧ್ಯಮ ಕೂಡ ಹೆಂಡತಿ ಮಕ್ಕಳನ್ನು ಬಿಟ್ಟು ನನ್ನ ಮಾವನ ಮನೆ ಕಾದಿದ್ದೀರಿ ನಿಮಗೂ ಒಳ್ಳೆಯದಾಗಲಿ ಎಂದು ಕೇಳಿದ್ದೇನೆ ಎಂದರು.

ಈ ದಾಳಿಗಳಿಂದ ನನ್ನ ಆತ್ಮಸ್ಥೈರ್ಯ ಕುಸಿದಿದೆ ಅನ್ನಿಸುತ್ತಿದೆಯೇ, ಮಾಧ್ಯಮದವರಿಗೆ ನಾನು ಸುಮ್ಮನಾದೆ ಎನ್ನಿಸುತ್ತಿದೆಯೇ  ನಮ್ಮ ಬಳಿಯೂ ಸಾಕಷ್ಟು ಅಸ್ತ್ರಗಳಿವೆ. ಸಮಯ ಬಂದಾಗ ಬಳಕೆ ಮಾಡುತ್ತೇವೆ. ನಾನು ದೇವಿ ದರ್ಶನ ಪಡೆದಿದ್ದೇನೆ. ಸ್ನೇಹಿತರು ಹೋಮ ಮಾಡಿಸಿದ್ದಾರೆ ಎಂದು ತಿಳಿಸಿದರು. ಐಟಿ ದಾಳಿಗಳಿಂದ ಎದರಿಸಿ ಡಿಕೆಶಿಯನ್ನು ಬಿಜೆಪಿಗೆ ಸೆಳೆಯಲಾಗುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ನಿಮಗೆ ಹಾಗೆ ಅನಿಸಿದರೆ ಹಾಗೆ ಅಂದುಕೊಳ್ಳಿ ಎಂದು ತಿಳಿಸಿದರು.  ಈ ಸಂದರ್ಭ ಕಾಂಗ್ರೆಸ್ ನ ಹಲವು ಮುಖಂಡರು ಅವರ ಜೊತೆಗಿದ್ದರು. (ಆರ್.ವಿ,ಕೆ.ಎಸ್,ಎಸ್.ಎನ್,ಎಸ್.ಎಚ್)

Leave a Reply

comments

Related Articles

error: