ಮೈಸೂರು

ರಾಜ್ಯ ಪೊಲೀಸರ ವೇತನ ಪರಿಷ್ಕರಿಸಿ: ಕರವೇಯಿಂದ ಸಾಂಕೇತಿಕ ಪ್ರತಿಭಟನೆ

ರಾಜ್ಯ ಪೊಲೀಸ್‍ ಸಿಬ್ಬಂದಿಯ ವೇತನವನ್ನು ಪರಿಷ್ಕರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯು ನಗರದ ನ್ಯಾಯಾಲಯದ ಮುಂಭಾಗದಲ್ಲಿರುವ ಗಾಂಧಿ ಪ್ರತಿಮೆ ಮುಂದೆ ಮಂಗಳವಾರದಂದು ಸಾಂಕೇತಿಕ ಪ್ರತಿಭಟನೆ ನಡೆಸಿತು.

ರಾಜ್ಯ ಆರಕ್ಷಕ ಸಿಬ್ಬಂದಿಗೆ ವಾರಕ್ಕೊಮ್ಮೆ ರಜೆ ಮತ್ತು ಹಲವು ರಿಯಾಯಿತಿಗಳನ್ನು ನೀಡುವುದಾಗಿ ಸರಕಾರ ಭರವಸೆ ನೀಡಿತ್ತು. ಆದರೆ, ಪೊಲೀಸರ ಪ್ರಮುಖ ಬೇಡಿಕೆಯಾದ ಶೇ.35ರಷ್ಟು ವೇತನ ಪರಿಷ್ಕರಣೆ ಬಗೆಹರಿಸುವ ಮೂಲಕ ಹಗಲಿರುಳು ವಾರದ ರಜೆಯೂ ಇಲ್ಲದೆ ದುಡಿಯುವ ಅವರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಕರವೇ ಕಾರ್ಯಕರ್ತರು ಮುಖ್ಯಮಂತ್ರಿ ಹಾಗೂ ಗೃಹಮಂತ್ರಿಗೆ ಒತ್ತಾಯಿಸಿದರು.

ವೇದಿಕೆಯ ಅಧ್ಯಕ್ಷ ಅರವಿಂದ ಶರ್ಮ, ಮುಖಂಡರಾದ ಸಿದ್ದೇಗೌಡ, ಸಂದೇಶ್‍ ಪವಾರ್, ಧನಪಾಲ್ ಕುರುಬರಹಳ್ಳಿ, ಮಹದೇವಸ್ವಾಮಿ, ಬಂಗಾರಪ್ಪ, ಚಂದ್ರ, ದೀಪಕ್ ಮೊದಲಾದವರು ಭಾಗವಹಿಸಿದ್ದರು.

Leave a Reply

comments

Related Articles

error: