
ಮೈಸೂರು
ಅನುಮಾನಾಸ್ಪದವಾಗಿ ಜಿಂಕೆ ಸಾವು
ಮೈಸೂರು,ಆ.30:- ನಗರದ ಬೋಗಾದಿಯ ಮರಿಯಪ್ಪನ ಕೆರೆ ಬಳಿ ಜಿಂಕೆಯೊಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದೆ.
ಮರಿಯಪ್ಪನ ಕೆರೆಯ ಬಳಿ ಅಳವಡಿಸಲಾದ ತಂತಿಬೇಲಿಗೆ ಸಿಲುಕಿ ಜಿಂಕೆ ಸಾವನ್ನಪ್ಪಿರಬೇಕೆಂದು ಶಂಕಿಸಲಾಗಿದೆ. ಆದರೆ ಜಿಂಕೆಯ ಮೈಮೇಲೆ ಗಾಯದ ಗುರುತುಗಳಿವೆ. ಬುಧವಾರ ಬೆಳಿಗ್ಗೆ ವಾಯುವಿಹಾರಕ್ಕೆ ತೆರಳಿದವರ ಕಣ್ಣಿಗೆ ಮೃತ ಜಿಂಕೆ ಕಾಣ ಸಿಕ್ಕಿದ್ದು, ಬಹುಶಃ ಇಲವಾಲಾ ಅರಣ್ಯದ ಕಡೆಗಳಿಂದ ಜಿಂಕೆ ಬಂದಿರಬೇಕೆಂದು ಹೇಳಲಾಗುತ್ತಿದೆ. ತಕ್ಷಣ ಅವರು ಸರಸ್ವತಿಪುರಂ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಅರಣ್ಯ ಇಲಾಖಾಅಧಿಕಾರಿಗಳ ಜೊತೆ ಆಗಮಿಸಿ ಪರಿಶೀಲನೆ ನಡೆಸಿದರು. ಪರೀಕ್ಷೆಯ ನಂತರವೇ ಸಾವಿಗೆ ಕಾರಣ ತಿಳಿದು ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.(ಕೆ.ಎಸ್,ಎಸ್.ಎಚ್)