ಮೈಸೂರು

ಆ.31 ರಂದು ವಿದ್ಯುತ್ ನಿಲುಗಡೆ

ಮೈಸೂರು, ಆ.29 : ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ 66/11 ಕೆ.ವಿ. ದೊಡ್ಡಕೆರೆ ಮೈದಾನ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕ.ವಿ.ಪ್ರ.ನಿ.ನಿ. ವತಿಯಿಂದ 2ನೇ ತ್ರೈಮಾಸಿಕ ಹಾಗೂ ದಸರಾ-2017ರ ನಿರ್ವಹಣಾ ಕಾಮಗಾರಿ ಹಾಗೂ 66/11 ಕೆ.ವಿ. ಎಫ್.ಟಿ.ಎಸ್. ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ 11 ಕೆ.ವಿ. ಆರ್.ಆರ್. ಹಾಗೂ ವಾಟರ್ ವಕ್ರ್ಸ್ ಫೀಡರ್‍ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ.

ಆಗಸ್ಟ್ 31 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ  ರಾಮಾನುಜ ರಸ್ತೆ, ಹೊಸಬಂಡೀಕೆರೆ, ಜೆ.ಎಸ್.ಎಸ್. ಆಸ್ಪತ್ರೆ, ಅಗ್ರಹಾರ, ಬಸವೇಶ್ವರ ರಸ್ತೆ, ಚಾಮುಂಡಿಪುರಂ, ಸಬರ್ಬ್ ಬಸ್ ಸ್ಟಾಂಡ್, ನಜûರ್‍ಬಾದ್, ಇಟ್ಟಿಗೆಗೂಡು, ಮೃಗಾಲಯ, ಸರ್ಕಾರಿ ಅತಿಥಿ ಗೃಹ, ಮೈಸೂರು ತಾಲ್ಲೂಕು ಕಚೇರಿ, ದೇವರಾಜ್ ಅರಸ್ ರಸ್ತೆ, ಬಿ.ಎನ್. ರಸ್ತೆ, ಚಾಮುಂಡಿ ಬೆಟ್ಟ, ಸಿದ್ದಾರ್ಥ ನಗರ, ಆಲನಹಳ್ಳಿ, ಗಿರಿದರ್ಶಿನಿ ಬಡಾವಣೆ, ಅರಮನೆ, ಶ್ರೀಹರ್ಷ ರಸ್ತೆ, ಸಯ್ಯಾಜಿರಾವ್ ರಸ್ತೆ, ಇರ್ವಿನ್ ರಸ್ತೆ, ಧನ್ವಂತರಿ ರಸ್ತೆ, ಶಿವರಾಂಪೇಟೆ, ಎಫ್‍ಟಿಎಸ್ ಪುಲಿಕೇಶಿ ರಸ್ತೆ, ಸಯ್ಯಾಜಿರಾವ್ ರಸ್ತೆ, ತಿಲಕನಗರ, ಅಶೋಕ ರಸ್ತೆ, ಕೈಲಾಸಪುರಂ, ಮಿಷನ್ ಆಸ್ಪತ್ರೆ, ಮಂಡಿಮೊಹಲ್ಲಾ, ಲಷ್ಕರ್ ಮೊಹಲ್ಲಾ, ರಾಜ್‍ಕಮಲ್ ಟಾಕೀಸ್, ಶಿವರಾಮ್‍ಪೇಟೆ, ಕೆ.ಆರ್. ಆಸ್ಪತ್ರೆ, ಬೋಟಿ ಬಜಾರ್, ಮಾರುಕಟ್ಟೆ, ಧನ್ವಂತರಿ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಸಾರ್ವಜನಿಕರು ಸಹಕರಿಸಬೇಕಾಗಿ ಕೋರಿದೆ.

-ಎನ್.ಬಿ.

Leave a Reply

comments

Related Articles

error: