ಮೈಸೂರು

ಮೈಸೂರು ಮೃಗಾಲಯದಲ್ಲಿ ಹೊಸ ಅತಿಥಿಗಳ ಆಗಮನ

page5ancho-webಮೈಸೂರು ಶ್ರೀಚಾಮರಾಜೇಂದ್ರ ಮೃಗಾಲಯದಲ್ಲಿ ಹೊಸ ಅತಿಥಿಗಳ ಆಗಮನವಾಗಿದೆ. ತೋಳ, ಸಾರಸ್ ಕ್ರೇನ್, ಮರಿಗಳಿಗೆ ಜನ್ಮ ನೀಡಿದ್ದು ಮೃಗಾಲಯದಲ್ಲಿ ಹೊಸ ಕಳೆ ಆವರಿಸಿದೆ.

ಅಕ್ಟೋಬರ್ 9ರಂದು ಇಲ್ಲಿನ ರಾಗಿಣಿ ಹಾಗೂ ನಾಗ ತೋಳದ ಜೋಡಿ ಮೂರು ಗಂಡು ಮರಿಗಳಿಗೆ ಜನ್ಮ ನೀಡಿವೆ. ಅಕ್ಟೋಬರ್ 21ರಂದು ಟಫ್ಡ್ ಕ್ಯಾಪ್ಚೂನ್ ಕೋತಿ ಒಂದು ಮರಿಗೆ ಜನ್ಮ ನೀಡಿದೆ.

ವನ್ಯ ಜೀವಿಗಳ ಕುಟುಂಬಕ್ಕೆ ಇದೀಗ ಮೂರು ಕರಡಿಗಳು ಸೇರ್ಪಡೆಯಾಗಿವೆ. ತುಮಕೂರು ಜಿಲ್ಲೆಯಲ್ಲಿ ಸೆರೆ ಸಿಕ್ಕ ತಾಯಿ ಹಾಗೂ ಮರಿ ಕರಡಿಯನ್ನು ಜುಲೈ 31ರಂದು ಮೃಗಾಲಯಕ್ಕೆ ಕರೆತರಲಾಗಿತ್ತು. ಆಗಸ್ಟ ತಿಂಗಳಿನಲ್ಲಿ ತುಮಕೂರಿನಿಂದಲೇ ತಂದಿದ್ದ ಮತ್ತೊಂದು ಕರಡಿ ಸೇರಿದಂತೆ ಎಲ್ಲವನ್ನೂ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ.

Leave a Reply

comments

Related Articles

error: