ಕರ್ನಾಟಕಪ್ರಮುಖ ಸುದ್ದಿ

2018ರ ಚುನಾವಣೆಯಲ್ಲೂ ನಾವೇ ಗೆಲ್ಲುತ್ತೇವೆ: ಸಿಎಂ ಸಿದ್ದರಾಮಯ್ಯ

ಚಾಮರಾಜನಗರ,ಆ.30-ಕೊಟ್ಟ ಮಾತು ತಪ್ಪಿದರೆ ರಾಜ್ಯದ ಜನತೆಯ ಆಕ್ರೋಶಕ್ಕೆ ತುತ್ತಾಗಬೇಕಾಗುತ್ತದೆ. ಆದರೆ ನಾವು ನುಡಿದಂತೆ ನಡೆದಿದ್ದೇವೆ. ಹೀಗಾಗಿ 2018ರ ಚುನಾವಣೆಯಲ್ಲೂ ನಾವೇ ಗೆಲ್ಲುತ್ತೇವೆ. ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಚಾಮರಾಜನಗರದ ತೆರಕಣಾಂಬಿಯಲ್ಲಿ ಮಾತನಾಡಿದ ಅವರು, 2018 ರ ಚುನಾವಣೆಯಲ್ಲಿ 130 ಕ್ಕೂ ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲುತ್ತದೆ. ಹೀಗಾಗಿ ಬಿಜೆಪಿಯವರಿಗೆ ತಮ್ಮ ಸೋಲು ಖಚಿತ ಎಂಬುದು ಗೊತ್ತಾಗಿದ್ದು, ಅದಕ್ಕಾಗಿ ಸಿ ಪೋರ್ ಸರ್ವೇ ಬಗ್ಗೆ ಬಿಜೆಪಿಯವರು ಟೀಕೆ ಮಾಡುತ್ತಿದ್ದಾರೆ. ನುಡಿದಂತೆ ನಡೆದಿರುವುದರಿಂದ ಹಾಗಾಗಿ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಗೆಲ್ಲಲ್ಲು ಸಾಧ್ಯವಾಯಿತು. ಉಪಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಕೆಟ್ಟ ಪದಗಳಿಂದ ಟೀಕೆ ಮಾಡಿದರು. ಆವಾಚ್ಯ ಶಬ್ಧಗಳಿಂದ ನಿಂದಿಸಿದರು. ಅದಕ್ಕೆ ಗುಂಡ್ಲುಪೇಟೆ, ನಂಜನಗೂಡಿನ ಉಪಚುನಾವಣೆಯಲ್ಲಿ ಜನತೆ ಬಿಜೆಪಿಗೆ ತಕ್ಕಪಾಠ ಕಲಿಸಿದ್ದಾರೆ ಎಂದರು.

ಮೋದಿಯವರದು ಮನ್ ಕಿ ಬಾತ್. ನಮ್ಮದು ಕಾಮ್ ಕಿ ಬಾತ್. ಮೋದಿ ಮಾತಿನಲ್ಲೇ ಕೈಲಾಸ ತೋರಿಸುತ್ತಾರೆ. ಆದರೆ ನಾವು ಕೆಲಸ ಮಾಡಿ ತೋರಿಸುತ್ತೇವೆ.  ಬಿಜೆಪಿ ನಾಯಕರಿಗೆ ರೈತರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ.  ಬಿಜೆಪಿಯವರಿಗೆ  ದೆಹಲಿಯಲ್ಲಿ ಒಂದು ನಾಲಿಗೆ, ಕರ್ನಾಟಕದಲ್ಲಿ ಒಂದು ನಾಲಿಗೆ.  ಮೋದಿ ಬಳಿಗೆ ನಿಯೋಗ ಹೋಗಿದ್ದಾಗ ತುಟಿ ಬಿಚ್ಚದ ಅನಂತಕುಮಾರ್, ಜಗದೀಶ್ ಶೆಟ್ಟರ್, ಶೋಭಕರಂದ್ಲಾಜೆ,  ಕರ್ನಾಟಕಕ್ಕೆ ಬಂದಾಗ ಕೌರವನ ಪಾತ್ರ ಮಾಡುತ್ತಿದ್ದಾರೆ.  ರೈತರ ಸಾಲ ಮನ್ನಾ ಮಾಡಲು ಹಿಂದೇಟು ಹಾಕುವ ಕೇಂದ್ರ ಸರ್ಕಾರ ಕೈಗಾರಿಕೋದ್ಯಮಿಗಳ ಸಾಲ ಮನ್ನಾ ಮಾಡುತ್ತೆ.  ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಇಂದಿರಾ ಕ್ಯಾಂಟೀನ್ ಆರಂಭಿಸುವ ಚಿಂತನೆ ಇದೆ.  ಬಡವರು ಹಸಿದು ಮಲಗಬಾರದು ಎಂಬುದು ನಮ್ಮ ಉದ್ದೇಶ.  ನಾವು ದಿನ ದಲಿತರ ಜೊತೆಯಲ್ಲೇ ಊಟ ಮಾಡೋದು. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಏಕೆ ದಲಿತರ ಮನೆಗೆ ಹೋಗಲಿಲ್ಲ. ಚುನಾವಣೆ ಸಮೀಪಿಸುತ್ತಿರುವುದರಿಂದ ಬಿಜೆಪಿಗೆ ದಲಿತರ ನೆನಪಾಗಿದೆ. ಈ ನಾಟಕ ಎಲ್ಲ ಬೇಡ ಎಂದು ಬಿಜೆಪಿಗೆ ತಿರುಗೇಟು ನೀಡಿದರು. (ವರದಿ-ಎಸ್.ಎನ್, ಎಂ.ಎನ್)

 

 

Leave a Reply

comments

Related Articles

error: