ಮೈಸೂರು

ಜಾಗೃತಿಗಾಗಿ ಜಿಎಸ್‍ಟಿ ಓಟ

ಮೈಸೂರು ಕೇಂದ್ರೀಯ ಅಬಕಾರಿ ಮತ್ತು ಸೇವಾ ತೆರಿಗೆ ಇಲಾಖೆಯು ‘ಜಾಗೃತಿ ಮೂಡಿಸಲು ಜಿಎಸ್‍ಟಿ ಓಟ’ ಎಂಬ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಕೆಲವೇ ದಿನಗಳಲ್ಲಿ ಕೇಂದ್ರವು ದೇಶದಲ್ಲಿ ಜಿಎಸ್‍ಟಿ( ಸರಕು ಮತ್ತು ಸೇವಾ ತೆರಿಗೆ) ಯನ್ನು ಅಳವಡಿಸಿಕೊಳ್ಳಲಿದ್ದು, ಈ ನಿಟ್ಟಿನಲ್ಲಿ ಈ ಯೋಜನೆಯ ಬಗ್ಗೆ ಅರಿವು ಮೂಡಿಸಲು ನಡಿಗೆ ಮತ್ತು ಓಟ ಕಾರ್ಯಕ್ರಮ ನಡೆಯಿತು. ಕೇಂದ್ರ ಅಬಕಾರಿ ಕಚೇರಿಯು ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಸಿದ್ದಾರ್ಥನಗರದಿಂದ ಚಾಮುಂಡಿಬೆಟ್ಟದಲ್ಲಿರುವ ನಂದಿ ವಿಗ್ರಹದವರೆಗೆ ನಡಿಗೆ/ಓಟ ನಡೆಯಿತು.

ಜಿಎಸ್‍ಟಿ ಓಟದಲ್ಲಿ ನೂರಕ್ಕೂ ಹೆಚ್ಚು ಕೇಂದ್ರ ಅಬಕಾರಿ ಇಲಾಖೆಯ ಅಧಿಕಾರಿಗಳು ಮತ್ತು  ಕುಟುಂಬದವರು ಪಾಲ್ಗೊಂಡಿದ್ದರು.

Leave a Reply

comments

Related Articles

error: