ಮೈಸೂರು

ಈಜು ಚಾಂಪಿಯನ್‍ಶಿಪ್‍ನಲ್ಲಿ ಮಿಂಚಿದ ಮೈಸೂರಿಗರು

ಇತ್ತೀಚಿಗೆ ಸಿಕಂದರಾಬಾದ್‍ನಲ್ಲಿ ನಡೆದ 13ನೇ ರಾಷ್ಟ್ರೀಯ ಮಾಸ್ಟರ್ ಈಜು ಚಾಂಪಿಯನ್‍ಶಿಪ್‍ನಲ್ಲಿ ಮೈಸೂರಿನ ಸುಂದರ್ ಬಸಪ್ಪ, ಸೀತಾ ರಾವ್ ಮತ್ತು ಡಾ. ಅನ್ಯಾ ಸೈನಿ ಅವರು ವಿವಿಧ ವಯೋವರ್ಗದಲ್ಲಿ ಉತ್ತಮ ಪ್ರದರ್ಶನ ನೀಡಿ ಚಿನ್ನದ ಸ್ಥಾನ ಪಡೆದಿದ್ದಾರೆ.

ಹಿಮ್ಮುಖವಾಗಿ ಈಜುವ ಸ್ಪರ್ಧೆಯಲ್ಲಿ ಸುಂದರ್ ಬಸಪ್ಪ 50 ಮೀಟರ್, 100 ಮೀಟರ್‍ನಲ್ಲಿ ಪ್ರಥಮ ಮತ್ತು 50 ಮೀಟರ್ ಬ್ರೆಸ್ಟ್ ಸ್ಟ್ರೋಕ್‍ನಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.

ಫ್ರೀಸ್ಟೈಲ್ ಈಜಿನಲ್ಲಿ ಸೀತಾ ರಾವ್ 400 ಮೀಟರ್, 200 ಮೀಟರ್, 100 ಮೀಟರ್, 50 ಮೀಟರ್‍, 4*50 ಮೀಟರ್‍ನಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.

ಡಾ.ಅನ್ಯಾ ಸೈನಿ ಅವರು ಫ್ರೀಸ್ಟೈಲ್‍ನಲ್ಲಿ 400 ಮೀಟರ್, 200, 100, 50 ಮತ್ತು 4*50 ಮೀಟರ್‍ನಲ್ಲಿ ಚಿನ್ನದ ಪದಕ ಪಡೆದಿದ್ದಾರೆ.

Leave a Reply

comments

Related Articles

error: